ಮಾಲಿನ್ಯ ಪೀಡಿತ 3ನೇ ಕೆಟ್ಟ ನಗರ ಬೆಂಗಳೂರು| 2020ರಲ್ಲಿ ಸಂಭವಿಸಿದ ಸಾವುಗಳೆಷ್ಟು? ಬೆಚ್ಚಿಬೀಳಿಸುವಂತಿದೆ ವರದಿ..

air pollution
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(19-02-2021): ಗ್ರೀನ್‌ಪೀಸ್ ಆಗ್ನೇಯ ಏಷ್ಯಾದ ವಿಶ್ಲೇಷಣೆಯ ಪ್ರಕಾರ, 2020 ರಲ್ಲಿ ಭಾರತದ ಅತಿದೊಡ್ಡ ವಾಯುಮಾಲಿನ್ಯಯುತ ನಗರಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. 12,000 ಸಾವುಗಳೊಂದಿಗೆ ವಾಯುಮಾಲಿನ್ಯ ಪೀಡಿತ ಭಾರತದ ಮೂರನೇ ಕೆಟ್ಟ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ.

ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಕಳೆದ 1 ವರ್ಷದಲ್ಲಿ 54,000 ಸಾವುಗಳು ಸಂಭವಿಸಿವೆ ಮತ್ತು ಮುಂಬೈಯಲ್ಲಿ 25,000 ಸಾವುಗಳು ಸಂಭವಿಸಿವೆ. ವಾಯು ಗುಣಮಟ್ಟದ ಮೇಲ್ವಿಚಾರಣಾ ತಂತ್ರಜ್ಞಾನ ಐಕ್ಯೂಏರ್ ಸಂಗ್ರಹಿಸಿದ ಗಾಳಿಯ ಗುಣಮಟ್ಟದ ಡೇಟಾವನ್ನು ಬಳಸಿಕೊಂಡು ಈ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ಗ್ರೀನ್‌ಪೀಸ್ ಹೇಳಿದೆ.

ಜಾಗತಿಕವಾಗಿ ನೋಡಿದರೆ ದೆಹಲಿಯ ಐದು ಜನಸಂಖ್ಯಾ ನಿಬಿಡ ನಗರಗಳಲ್ಲಿ (30 ಮಿಲಿಯನ್), ಮೆಕ್ಸಿಕೊ ನಗರ (22 ಮಿಲಿಯನ್), ಸಾವೊ ಪಾಲೊ (22 ಮಿಲಿಯನ್), ಶಾಂಘೈ (26 ಮಿಲಿಯನ್) ಮತ್ತು ಟೋಕಿಯೊ ಸೇರಿ ವಾಯುಮಾಲಿನ್ಯಕ್ಕೆ ಅಂದಾಜು 160,000 ಸಾವುಗಳು ಸಂಭವಿಸಿದೆ ಎಂದು ಗ್ರೀನ್ ಪೀಸ್ ವರದಿ ತಿಳಿಸಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು