ಭಾರತದಲ್ಲಿ ಅಕಾಲಿಕ ಮರಣಕ್ಕೆ ಕಾರಣ ಏನು| ಸಂಶೋಧನೆ ಬಿಚ್ಚಿಟ್ಟಿದೆ ಬೆಚ್ಚಿಬೀಳಿಸುವ ವರದಿ

air pollution
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(01-11-2020): ಭಾರತದಲ್ಲಿ ಅಕಾಲಿಕ ಮರಣ ಹಾಗೂ ಹಸುಗೂಸುಗಳ ಸಾವಿಗೂ ವಾಯುಮಾಲಿನ್ಯವೇ ಪ್ರಮುಖ ಕಾರಣ ಎಂದು ಸ್ಟೇಟ್‌ ಆಫ್ ಗ್ಲೋಬಲ್‌ ಏರ್‌ 2020 ಅಧ್ಯಯನ ವರದಿ ತಿಳಿಸಿದೆ.

2019ರಲ್ಲಿ ವಿಶ್ವದಲ್ಲಿ ವಾಯುಮಾಲಿನ್ಯದಿಂದ 66.7ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇದು ಒಟ್ಟು ಜಾಗತಿಕ ಮರಣ ಪ್ರಮಾಣದ ಶೇ.12ರಷ್ಟಿದೆ.

ವಿಶ್ವಾದ್ಯಂತ ಜನರ ಸಾವಿಗೆ ಪ್ರಮುಖ ಕಾರಣವಾಗಿರುವ 87 ಅಂಶಗಳನ್ನು ಗುರುತಿಸಲಾಗಿದೆ. ಆ ಪೈಕಿ ವಾಯುಮಾಲಿನ್ಯ ಅಗ್ರ ನಾಲ್ಕನೇ ಸ್ಥಾನದಲ್ಲಿದ್ದು, ಅನಂತರದ ಸ್ಥಾನದಲ್ಲಿ ರಕ್ತದೊತ್ತಡ, ತಂಬಾಕು ಸೇವನೆ ಇದೆ.

ಭಾರತದಲ್ಲಿ ಅಕಾಲಿಕ ಮರಣಕ್ಕೆ ವಾಯುಮಾಲಿನ್ಯವೇ ಪ್ರಮುಖ ಕಾರಣ.2010ರಿಂದ ಪ್ರತಿವರ್ಷ 2.5 ಪಾಟಿಕಲ್ಸ್ ಮ್ಯಾಟರ್‌ (ಪಿಎಂ) ಮಾಲಿನ್ಯ ಕಣದ ಪ್ರಮಾಣ ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ.

ಭಾರತದಲ್ಲಿ ಪಿಎಂ ಮಾಲಿನ್ಯ ಕಣಗಳ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಕನಿಷ್ಠ ಸುರಕ್ಷಿತ ಮಾನದಂಡ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚಿದೆ.

2019ರಲ್ಲಿ ಮನೆಯ ಒಳಗಿನ ವಾಯುಮಾಲಿನ್ಯದಿಂದಾಗಿ ಸುಮಾರು 6 ಲಕ್ಷ ಭಾರತೀಯರು ಸಾವನ್ನಪ್ಪಿದ್ದರೆ, ಜಾಗತಿಕವಾಗಿ 2.31 ದಶಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ಜಾಗತಿಕ ವರದಿ ತಿಳಿಸಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು