ನವದೆಹಲಿ(16-12-2020): ಏರ್ ಇಂಡಿಯಾವನ್ನು ಖಾಸಗೀಕಣಗೊಳಿಸದಿದ್ದರೆ, ಮುಚ್ಚಬೇಕಾಗಬಹುದೆಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಸಂಸ್ಥೆಯ ಉದ್ಯೋಗಿಗಗಳ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಮತ್ತು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವವರೆಗೂ ಯಾರನ್ನೂ ಕೆಲಸದಿಂದ ತೆಗೆದು ಹಾಕಲಾಗುವುದಿಲ್ಲವೆಂದೂ ಅವರು ಭರವಸೆ ನೀಡಿದರು.
ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದೆ. ಸರಿಯಾದ ವೇತನ ನೀಡದ ಕಾರಣ ಪೈಲಟುಗಳು ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವುದು ಕಪೋಕಲ್ಪಿತ ಆರೋಪ. ಯಾವ ಪೈಲಟ್ ಕೂಡಾ ರಾಜೀನಾಮೆ ನೀಡಿದ್ದು ಈ ವರೆಗೂ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಆರ್ಥಿಕ ಸಂದಿಗ್ಧತೆಯ ಕಾರಣದಿಂದಾಗಿ ಉದ್ಯೋಗಿಗಳ ವೇತನದಿಂದ ಇಪ್ಪತ್ತೈದು ಶೇಕಡಾ ಮೊತ್ತವನ್ನು ತಡೆಹಿಡಿಯಲಾಗಿದೆ. ಆದರೆ ಸಂಪೂರ್ಣವಾಗಿ ಖಾಸಗೀಕರಣಕ್ಕೆ ಒಳಪಟ್ಟ ಬಳಿಕ ಅದನ್ನು ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದರು.
ಏರ್ ಇಂಡಿಯಾಗೆ ಸರಿ ಸುಮಾರು 58000 ಕೋಟಿ ಸಾಲವಿದೆಯೆಂದು ಅಂದಾಜಿಸಲಾಗಿತ್ತು. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಖಾಸಗೀಕಣವಾಗಲಿದೆಯೆಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.