ಕಳೆದ ಒಂದು ವರ್ಷದಲ್ಲಿ 8,500ಕ್ಕೂ ಅಧಿಕ ಮಂದಿ ಹಿಂಸಾಚಾರಕ್ಕೆ ಬಲಿ| ಎಐಎಚ್‌ಆರ್‌ಸಿ ತೆರೆದಿಟ್ಟ ಬೆಚ್ಚಿಬೀಳಿಸುವ ವರದಿ

afghan
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಾಬೂಲ್(27-01-2021): ಅಪ್ಘಾನಿಸ್ತಾನದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಯುದ್ಧ ಮತ್ತು ಹಿಂಸಾಚಾರದಲ್ಲಿ 8,500 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಪಘಾನ್ ಸ್ವತಂತ್ರ ಮಾನವ ಹಕ್ಕುಗಳ ಆಯೋಗ (ಎಐಎಚ್‌ಆರ್‌ಸಿ) ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಪಡಿಸಿದೆ.

ಎಐಎಚ್‌ಆರ್‌ಸಿ ಮಾಹಿತಿಯ ಪ್ರಕಾರ, 2019 ಕ್ಕೆ ಹೋಲಿಸಿದರೆ ಅಫ್ಘಾನಿಸ್ತಾನದಲ್ಲಿ ನಾಗರಿಕರ ಸಾವುನೋವು 2020 ರಲ್ಲಿ ಶೇಕಡಾ 21 ರಷ್ಟು ದಾಖಲಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ಘಟನೆಗೆ ತಾಲೀಬಾನ್ ಮೊದಲ ಕಾರಣವಾದರೆ, ಅಪರಿಚಿತ ದುಷ್ಕರ್ಮಿಗಳ ತಂಡವು ವಿಧ್ವಂಸಕ ಕೃತ್ಯವನ್ನು ನಡೆಸಿದೆ.

ಈ ಅವಧಿಯಲ್ಲಿ 4,568 ಸಾವುಗಳು ಮತ್ತು ನಾಗರಿಕರ ಗಾಯಗಳಿಗೆ ತಾಲಿಬಾನ್ ಕಾರಣವಾಗಿದ್ದರೆ, ಅಪರಿಚಿತ ಗುಂಪುಗಳು 2,107 ಜನರನ್ನು ಕೊಂದು ಹಾಕಿದೆ.1,188 ಸಾವು-ನೋವುಗಳಿಗೆ ಭದ್ರತಾ ಪಡೆಗಳನ್ನು ದೂಷಿಸಲಾಗಿದೆ. ನಾಗರಿಕರ ಸಾವುನೋವು ಇನ್ನೂ ಹೆಚ್ಚಾಗಿದೆ, ಅಫ್ಘಾನಿಸ್ತಾನದಲ್ಲಿ ದುರಂತ ನಡೆಯುತ್ತಿದೆ ಎಂದು ಎಐಎಚ್‌ಆರ್‌ಸಿಯ ಉಪ ಮುಖ್ಯಸ್ಥ ನಯೀಮ್ ನಜಾರಿ ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು