ಚೆನ್ನೈ(22-11-2020): 2021ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ಸೆಲ್ವಂ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಚೆನ್ನೈನಲ್ಲಿ ನಡೆದ ಸರ್ಕಾರಿ ಸಮಾರಂಭದಲ್ಲಿ ಹೇಳಿದ್ದಾರೆ.
ಕಣ್ಣಂಕೊಟ್ಟೈ- ಥರ್ವೊಯ್ ಕಂಡಿಗೈ ಜಲಾಶಯವನ್ನು ರಾಷ್ಟ್ರಕ್ಕೆ ಸಮರ್ಪಿಸುವುದು, ಚೆನ್ನೈ ಮೆಟ್ರೋ ರೈಲು ಹಂತ 2 ಸೇರಿದಂತೆ ಉನ್ನತ ಮಟ್ಟದ ಯೋಜನೆಗಳಿಗೆ ಅಡಿಪಾಯ ಹಾಕುವುದರ ಜೊತೆಗೆ, ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಬಗ್ಗೆ ಅಮಿತ್ ಶಾ ಅವರು ಟೀಕಿಸಿದ್ದು, ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಹಿಂದಿಯಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ತಮಿಳಿನ ಪ್ರಾಚೀನತೆ ಮತ್ತು ಸಂಸ್ಕೃತಿಯನ್ನು ಶ್ಲಾಘಿಸಿದರು.
ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರ ಎಲ್ಲಾ ವರ್ಷಗಳಲ್ಲಿ ಭ್ರಷ್ಟಾಚಾರ, ಕುಟುಂಬ ಮತ್ತು ಜಾತಿ ರಾಜಕಾರಣದ ವಿರುದ್ಧ ಹೋರಾಡಿದೆ ಎಂದು ಶಾ ಹೇಳಿದರು. ಭಾರತದ ಇತರ ಕೆಲವು ರಾಜ್ಯಗಳ ಜನರಂತೆ ಕುಟುಂಬ ರಾಜಕೀಯವನ್ನು ಮಾಡುವವರಿಗೆ ಜನರು ಪಾಠ ಕಲಿಸಬೇಕೆಂದು ತಮಿಳುನಾಡಿನ ಜನರನ್ನು ಒತ್ತಾಯಿಸಿದರು. .