ಅಗಸದಲ್ಲಿ ಹೆರಿಗೆ ಮಾಡಿದ ಮಹಿಳೆ |ನೆರವಿಗೆ ನಿಂತ ವಿಮಾನ ಸಂಸ್ಥೆ ಸಿಬ್ಬಂದಿ ಹಾಗೂ ಪ್ರಯಾಣಿಕರಲ್ಲೊಬ್ಬರಾದ ಡಾ ಸುಬಹಾನ ನಜೀರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ವಿಮಾನ ಟೇಕ್ ಆಫ್ ಆಗಿ ಬಾನಂಗಳದಲ್ಲಿ ಹಾರುತ್ತಿರಬೇಕಾದರೆ ಫಿಲಿಪೈನ್ಸ್ ಮೂಲದ ಮಹಿಳೆಯೊಬ್ಬರಿಗೆ ಪ್ರಸವ ವೇದನೆ ಉಂಟಾಗಿದ್ದು,ವಿಮಾನ ಸಂಸ್ಥೆಯ ಸಿಬ್ಬಂದಿಯ ಮತ್ತು ಪ್ರಯಾಣಿಕಲ್ಲೊಬ್ಬರಾದ ಡಾ ಸುಬಹಾನ ನಜೀರ್ ಅವರ ಸಹಕಾರದಿಂದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

6ಇ 469 ಹೆಸರಿನ ಇಂಡಿಗೋ ವಿಮಾನ ಬೆಂಗಳೂರಿನಿಂದ ಜೈಪುರಕ್ಕೆ ಚಲಿಸುತ್ತಿದ್ದಾಗ ಹೆಣ್ಣುಮಗುವಿನ ಜನನವಾಗಿದೆ.
ಅಲ್ಲಿನ ವಿಮಾನದ ಸಿಬ್ಬಂದಿ ಜೈಪುರದ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ ಜೈಪುರಕ್ಕೆ ತಲುಪುತಿದ್ದಂತೆ ಕೂಡಲೇ ಅಂಬುಲೆನ್ಸ್ ಮತ್ತು ವೈದ್ಯರನ್ನು ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡಿದ್ದು, ವಿಮಾನದಲ್ಲಿ ಜನನವಾದ ಮಗು ಹಾಗೂ ತಾಯಿ ಇಬ್ಬರೂ ಕೂಡ ಆರೋಗ್ಯದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಮಾನ ಸಿಬ್ಬಂದಿ ಮತ್ತು ಡಾ ಸುಬಹಾನಾ ರವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು