ಮಸ್ಕತ್(14-11-2020): ಕೊರೋನಾ ಪ್ರಕರಣಗಳು ದೃಢಗೊಂಡ ಬಳಿಕ ಒಮನಿನಲ್ಲಿ ಮಸೀದಿಗಳನ್ನೂ ಮುಚ್ಚಲಾಗಿತ್ತು. ನಾಳೆಯಿಂದ ಪ್ರಾರ್ಥನೆಗಳಿಗಾಗಿ ಅವು ತೆರೆಯಲಿವೆ. ಕಟ್ಟುನಿಟ್ಟಿನ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಔಕಾಫ್ ಸಚಿವಾಲಯ ಸೂಚಿಸಿದೆ.
ಪ್ರಥಮ ಹಂತದಲ್ಲಿ ನಾಲ್ಕು ನೂರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಪ್ರಾರ್ಥಿಸಲು ಸಾಧ್ಯವಾಗುವ ಮಸೀದಿಗಳನ್ನಷ್ಟೇ ತೆರೆಯಲು ಅವಕಾಶವಿರುವುದು. ಒಮನಿನಾದ್ಯಂತ ಇಂತಹ ಮೂರು ಸಾವಿರ ಸಾವಿರ ಮಸೀದಿಗಳು ಇವೆಯೆನ್ನಲಾಗಿದೆ.
ದಿನದ ಐದು ಸಮಯದ ಪ್ರಾರ್ಥನೆಗಾಗಿ, ಪ್ರತಿ ಸಮಯದ ಪ್ರಾರ್ಥನೆಗೆ ಇಪ್ಪತ್ತೈದು ನಿಮಿಷಗಳಷ್ಟೇ ಮಸೀದಿಯನ್ನು ತೆರೆಯಲಾಗುತ್ತದೆ. ಮಸೀದಿ ತೆರೆಯುವ ಅನುಮತಿ ಪಡೆಯಲು ಔಕಾಫ್ ವೆಬ್ಸೈಟಿನಲ್ಲಿ ಅರ್ಜಿ ಸಲ್ಲಿಸಬೇಕೆಂದು ಕೋರಲಾಗಿದೆ. ಪ್ರಾರ್ಥನೆ ಬರುವವರು ಕಟ್ಟುನಿಟ್ಟಾದ ಕೊರೋನಾ ಮುನ್ನೆಚ್ಚರಿಕಾ ನಿಯಮಾವಳಿಗಳನ್ನು ಪಾಲಿಸಬೇಕೆಂಬ ನಿರ್ದೇಶನವಿದೆ.