ಭಾರತ-ಪಾಕ್ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು ಎಪ್ಪತ್ತು ದಶಕದ ನಂತರ ಭೇಟಿಯಾದರು.

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಸ್ಲಾಮಾಬಾದ್: 1947ರ ಭಾರತ – ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು ಕರ್ತಾರ್ ಪುರದಲ್ಲಿ ಮತ್ತೆ ಒಂದಾಗಿದ್ದಾರೆ.
ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಪೈಸಲಾಬಾದ್ ನ ನಿವಾಸಿ ಸಿದ್ದೀಕ್ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹೆಬ್ ನಿಂದ ಭಾರತದ ಗಡಿಗೆ ಸಂಪರ್ಕವಿರುವ ಕರ್ತಾರ್ ಪುರ ಕಾರಿಡಾರ್ ಮೂಲಕ ಕರ್ತಾರ್ ಪುರಕ್ಕೆ ಆಗಮಿಸಿದ ಹಿರಿಯ ಸಹೋದರ ಅವರನ್ನಯ ಮುಖತ್ಹ ಬೇಟಿಯಾದರು. ಇವರ ಸಹೋದರ ಹಬೀಬ್ ಭಾರತದ ಪಂಜಾಬ್‌ನ ಪುಲ್ಲನ್ವಾಲ್ ನಲ್ಲಿ ವಾಸಿಸುತ್ತಿದ್ದಾರೆಂದು ಅಂತರರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ.

ಭಾರತ- ಪಾಕ್ ವಿಭಜನೆಯ ಸಂದರ್ಭದಲ್ಲಿ ಅವರ ಕುಟುಂಬವು ವಿಭಜನೆಗೊಂಡು ಅವರ ಹಿರಿಯ ಸಹೋದರ ಹಬೀಬ್ ವಿಭಜನೆ ರೇಖೆಯ ಭಾರತದ ಭಾಗದಲ್ಲಿ ಬೆಳೆದರು.
ಆ ಸಂದರ್ಭದಲ್ಲಿ ಸಿದ್ದೀಕ್ ಮಗುವಾಗಿದ್ದರು.

ಸಹೋದರರು ತಮ್ಮ ಪರಸ್ಪರ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.ಆಲಿಂಗನ ಮತ್ತು ನೆನಪುಗಳನ್ನು ನೆನಪಿಸಿಕೊಂಡ ನಂತರ ಖುಷಿಯಿಂದ ಕಣ್ಣೀರು ಸುರಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು