ಬಿಹಾರ(16-12-2020): ಭಾರತದ ಪೌರತ್ವಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳೊಂದಿಗೆ ತಂಗಿದ್ದ ಅಫ್ಘಾನಿ ಪ್ರಜೆಗಳನ್ನು ಉತ್ತರ ಬಿಹಾರ ಪಟ್ಟಣದಲ್ಲಿ ಬಂಧಿಸಲಾಗಿದೆ.
ಉತ್ತರ ಬಿಹಾರ ಪಟ್ಟಣದಲ್ಲಿ ಪೌರತ್ವಕ್ಕೆ ಸಂಬಂಧಿಸಿದ “ನಕಲಿ” ದಾಖಲೆಗಳೊಂದಿಗೆ ತಂಗಿದ್ದಾರೆ ಎಂದು ತಿಳಿದುಬಂದ ನಂತರ ಐವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕತಿಹಾರ್ನ ಎಸ್ಡಿಪಿಒ ಅಮರ್ ಕಾಂತ್ ಅವರ ಪ್ರಕಾರ, ಗುಲಾಮ್ ಎಂಬ ವಿದೇಶಿ ಪ್ರಜೆಗಳಲ್ಲಿ ಒಬ್ಬರು ಕೆಲವು ಕೆಲಸಗಳಿಗಾಗಿ ಪೊಲೀಸರನ್ನು ಭೇಟಿ ಮಾಡಿದ್ದರು ಮತ್ತು ಅವರ ಗುರುತಿನ ಬಗ್ಗೆ ತನಿಖೆ ನಡೆಸಿದಾಗ ಅಪ್ಘಾನ್ ಪ್ರಜೆ ಎನ್ನುವುದು ತಿಳಿದು ಬಂದಿದೆ. ಬಳಿಕ ಅವರು ವಾಸಿಸುತ್ತಿರುವ ಮನೆಯ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೌರತ್ವಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.