ಅಬ್ದುಲ್ ಕರೀಂ ಹಾಜಿ ಪುತ್ರಿ ಲೈಲಾ ಹೃದಯಾಘಾತದಿಂದ ನಿಧನ

marriege
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು(01-03-2021): ನಿನ್ನೆ ವಿವಾಹವಾಗಿದ್ದ ಮದುಮಗಳು ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಬಳಿ ನಡೆದಿದೆ.

ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಮೃತ ದುರ್ದೈವಿ.

ನಿನ್ನೆ ಲೈಲಾ ವಿವಾಹ ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ನೆರವೇರಿತ್ತು. ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವೂ ಏರ್ಪಡಿಸಲಾಗಿತ್ತು. ಆ ಬಳಿಕ ನವಜೋಡಿಗಳು ಆಫಿಯಾ ಮನೆಯಲ್ಲಿ ಇದ್ದರು. ನಿನ್ನೆ ಬೆಳಿಗ್ಗಿನ ಜಾವ 3ಗಂಟೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಧುವಿನ ಅಕಾಲಿಕ ಮರಣದಿಂದಾಗಿ ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು