ಮೂಗಿನ ಮೇಲಿನ ಹೊಲಿಗೆಗಳು ಮಾಸಿದರೂ, ಕೇಸ್ ದಾಖಲಾಗಿಲ್ಲ| ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಆದಿವಾಸಿಗೆ ಸಿಗದ ನ್ಯಾಯ!

adivasi man
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(29-01-2021): ಜನರ ರಕ್ಷಣೆಯನ್ನು ಮಾಡಬೇಕಾದವರು ಜನರ ಮೇಲೆ ಎರಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಭಾರತದ ವಿವಿಧೆಡೆ ವರದಿಯಾಗುತ್ತಿದೆ. ಪೊಲೀಸರು ಕರ್ತವ್ಯ ನಿಷ್ಠೆಗಿಂತ ಅಸಹಾಯಕರ ಮೇಲೆ ಅಧಿಕಾರದ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿರುವುದು ಕಂಡುಬರುತ್ತಿದೆ. ಇಂತದ್ದೆ ಪ್ರಕರಣ ಝಾರ್ಖಾಂಡ್ ನಲ್ಲಿ ವರದಿಯಾಗಿದೆ. ಆದಿವಾಸಿ ವ್ಯಕ್ತಿ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

ಬನ್ಶಿ ಹನ್ಸ್ಡಾ ಎಂಬ 40ರ ಅದಿವಾಸಿ ವ್ಯಕ್ತಿಯ ಮೂಗಿನ ಮೇಲಿನ ನ ಏಳು ಹೊಲಿಗೆಗಳು ಮಾಸಿ ಹೋಗುತ್ತಿದೆ. ಆದರೆ ಅವನ ಕೋಪ ಇನ್ನೂ ತಾಜಾವಾಗಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಬನ್ಶಿ ಹನ್ಸ್ಡಾ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ ಈವರೆಗೆ ಎಫ್ ಐಆರ್ ಕೂಡ ದಾಖಲಿಸಿಲ್ಲ. ಯಾಕೆಂದರೆ ಪೊಲೀಸ್ ಇಲಾಖೆಯೊಳಗಿನ ಆರೋಪಿಗಳನ್ನು ಪೊಲೀಸರೇ ರಕ್ಷಣೆ ಮಾಡಲು ಮುಂದಾಗಿದ್ದಾರೆ.

ಡಿಸೆಂಬರ್ 12 ರ ಸಂಜೆ, ಗೋಮಿಯಾ ಬ್ಲಾಕ್‌ನ ಧವಾಯಾ ಗ್ರಾಮದ ನಿವಾಸಿ ಹನ್ಸ್ಡಾ ಅವರು ಬೊಕಾರೊ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಗಣಿಗಾರಿಕೆ ಸಲಕರಣೆಗಳ ಕಾರ್ಖಾನೆಯಿಂದ ಮನೆಗೆ ಮರಳಿ ಸೈಕನಲ್ಲಿ ತೆರಳುತ್ತಿದ್ದಾಗ  ಪೊಲೀಸ್ ಚೆಕ್‌ಪಾಯಿಂಟ್ ಬಳಿ ಆತನನ್ನು ಪೊಲೀಸರು ವಿನಾಃ ಕಾರಣ ರೈಫಲ್ ನಿಂದ ಹೊಡೆದು, ನೆಲಕ್ಕೆ ಉರುಳಿಸಿ, ಬೂಟ್ ನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಘಟನೆ ನಡೆದು ತಿಂಗಳುಗಳೇ ಕಳೆದರೂ ಈವರೆಗೆ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಸಿಎಂ ತನಿಖೆಯ ಆದೇಶದ ಹೊರತಾಗಿಯೂ ಯಾವುದೇ ಕ್ರಮ ಜರುಗಿಲ್ಲ ಎಂದು ಅಸಹಾಯಕೆತಯನ್ನು ಆದಿವಾಸಿ ವ್ಯಕ್ತಿ ವ್ಯಕ್ತಪಡಿಸಿದ್ದಾರೆ.

 

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು