ಚೆನ್ನೈ : ತಮಿಳುನಾಡು ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ದಿನದಿಂದ ದಿನಕ್ಕೆ ಸ್ವಾರಸ್ಯಕರ ಬೆಳವಣಿಗೆಗಳು ನಡೆಯುತ್ತಲೇ ಇದೆ.ಹಲವು ಆಶ್ವಾಸನೆಗಳು,ಭರವಸೆಗಳು,ಪ್ರಣಾಳಿಕೆಗಳು ಚುನಾವಣಾ ಸ್ಪರ್ಧಾಳುಗಳಿಂದ ಬಿಡುಗಡೆಯಾಗುತ್ತಲೇ ಇದೆ.ಅದೇ ರೀತಿ ಇಲ್ಲೊಬ್ಬರು ವಿವಾದಾತ್ಮಕ ಭರವಸೆಯನ್ನು ನೀಡುವ ಮೂಲಕ ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಬಲಿಯಾಗಿದ್ದಾರೆ.
‘ನಮ್ಮ ಪಕ್ಷ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದರೆ ನಿಮಗೆ ನೀಟ್ ಪರೀಕ್ಷೆಯಲ್ಲಿ ಕಾಪಿ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತೇವೆ’ ಎಂದು ಡಿ ಎಮ್ ಕೆ ಪಕ್ಷದ ಹಿರಿಯ ನಾಯಕ ಕೆ ಎಂ ನೆಹರೂ ವಿದ್ಯಾರ್ಥಿಗಳಿಗೆ ಆಶ್ವಾಸನೆ ನೀಡಿದ್ದಾರೆ.
‘ನೀಟ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಉತ್ತೀರ್ಣರಾಗುತ್ತಿರುವ ರಾಜ್ಯಗಳಾದ ಮಧ್ಯಪ್ರದೇಶ,ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕಾಪಿ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕೊಡುತ್ತಾರೆ.ನಮಗೆ ಎಲ್ಲಾ ಗೊತ್ತಿದೆ. ನಿಮಗೂ ಕೂಡ ಅವಕಾಶವನ್ನು ಕಲ್ಪಿಸುತ್ತೇವೆ’ ಎಂದು ಅವರು ಹೇಳಿದರು.