ಕಾರ್ಡುಗಳೇ ಕಾರ್ಡುಗಳು!! ಆಧಾರ್ ಬಳಿಕ ಇದೀಗ ಅದೇ ಮಾದರಿಯಲ್ಲಿರುವ ‘ಫ್ಯಾಮಿಲಿ ಐಡಿ’!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಈಗಾಗಲೇ ಹಲವು ಐಡಿಗಳನ್ನು ಹೊತ್ತುಕೊಂಡು ನಡೆಯುತ್ತಿರುವ ಜನರಿಗೆ ಅವುಗಳ ಜೊತೆಗೆ ಮತ್ತೂ ಒಂದು ಐಡಿಯನ್ನು ಇರಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗುವ ಸಾಧ್ಯತೆಯಿದೆದೇಶಾದ್ಯಂತ ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಸರಕಾರವು ಚಿಂತನೆ ನಡೆಸುತ್ತಿದೆಯೆಂದು ವರದಿಯಾಗಿದೆ.

ಆಧಾರ್ ಕಾರ್ಡ್ ಮಾದರಿಯಲ್ಲೇಫ್ಯಾಮಿಲಿ ಐಡಿ ಕಾರ್ಡ್ವ್ಯವಸ್ಥೆ ದೇಶಾದ್ಯಂತ ಜಾರಿಗೆ ಬರಲಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಕುಟುಂಬದ ಜೊತೆಗೆ ಸೇರಿಸಿಕೊಂಡು ಗುರುತಿಸಿ, ವ್ಯವಹರಿಸಲು ಇದು ಸಹಕಾರಿಯಾಗಲಿದೆಯೆಂದು ಮೂಲಗಳು ತಿಳಿಸಿವೆ.

ಫ್ಯಾಮಿಲಿ ಐಡಿ ಕಾರ್ಡ್ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ಕಡೆಯೂ ಜಾರಿಗೆ ಬರಲಿದ್ದು, ಅಲ್ಲಿ ಜಾರಿಯಾದ ಸರಕಾರೀ ಯೋಜನೆಗಳ ಫಲಾನುಭವಿಗಳ ಬಗ್ಗೆ ತಿಳಿಯಲು, ಒಬ್ಬೊಬ್ಬ ಪ್ರಜೆ, ಆತನ ಕುಟುಂಬದ ಬಗೆಗಿನ ಮಾಹಿತಿ ಸುಲಭವಾಗಿ ದೊರೆಯುವಂತೆ ಮಾಡಲು ನೆರವಾಗಲಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಮೀಟಿವೈ) ಜೊತೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ ಸೇವೆಗಳ ಇಂಕ್(ಎನ್‌ಐಸಿಎಸ್‌ಐ) ಯೋಜನೆಯನ್ನು ಅಧ್ಯಯನ ಮಾಡುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ಕಾರ್ಯಗತಗೊಳಿಸಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಹರ್ಯಾಣ ಸರಕಾರವು ನಿಟ್ಟಿನಲ್ಲಿ ಮುಂದುವರಿದಿದೆ. ಅಲ್ಲಿ ಇದನ್ನುಪರಿವಾರ್ ಪೆಹ್ಚನ್ ಪತ್ರಎಂದು ಕರೆಯಲಾಗುತ್ತಿದೆ. 2019 ಜುಲೈಯಲ್ಲೇ ಅಲ್ಲಿ ಕಾರ್ಯಯೋಜನೆ ಹಾಕಲಾಗಿದೆಯಲ್ಲದೇ, ಕುಟುಂಬ ಸದಸ್ಯರ ಅನುಮತಿ ಪಡೆದುಕೊಂಡೇ ಅವರ ಪ್ರಾಥಮಿಕ ವಿವರಗಳನ್ನು ಅಲ್ಲಿ ಸಂಗ್ರಹಿಸಲಾಗುತ್ತಿದೆ. ಎಲ್ಲಾ ಕುಟುಂಬಗಳ ಅಧಿಕೃತ, ಪರಿಶೀಲಿಸಲಾದ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒಂದು ಸಂಗ್ರಹಿಸಿಡುವುದು ಇದರ ಉದ್ದೇಶ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು