ಹತ್ರಾಸ್ ಪ್ರಕರಣ| ನಿಮ್ಮ ಮಗಳಾಗಿದ್ದರೆ ಇದೇ ರೀತಿ ದಹನ ಮಾಡ್ತೀರಾ- ಎಡಿಜಿಗೆ ತರಾಟೆಗೆ ತೆಗೆದುಕೊಂಡ ಅಲಹಬಾದ್ ಹೈಕೋರ್ಟ್‌

hathras
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(13-10-2020): ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು 19 ವರ್ಷದ ದಲಿತ ಮಹಿಳೆಯನ್ನು ಮಧ್ಯರಾತ್ರಿಯಲ್ಲಿ ಕುಟುಂಬದ ಒಪ್ಪಿಗೆಯಿಲ್ಲದೆ ಅಂತ್ಯಸಂಸ್ಕಾರ ಮಾಡಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆಯ ಕುಟುಂಬದ ವಕೀಲ ಸೀಮಾ ಕುಶ್ವಾಹಾ, ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರ ನ್ಯಾಯಪೀಠ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಮಗಳಾಗಿದ್ದರೆ ಅದೇ ರೀತಿ ದಹನ ಮಾಡಲು ಅನುಮತಿಸಬಹುದೇ ಎಂದು ಕೇಳಿದರು.

ನ್ಯಾಯಾಲಯವು ಪೊಲೀಸ್ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಸಂತ್ರಸ್ತೆ ಶ್ರೀಮಂತ ಕುಟುಂಬದ ಹುಡುಗಿಯಾಗಿದ್ದರೆ ಏನು? ಎಂದು ಪ್ರಶ್ನಿಸಿದೆ. ವಿಶೇಷವೆಂದರೆ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಷ್ಕರ್, ಮಧ್ಯರಾತ್ರಿಯ ಅಂತ್ಯಕ್ರಿಯೆಯ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು