83 ವರ್ಷದ ಬುಡಕಟ್ಟು ಹಕ್ಕುಗಳ ಹೋರಾಟಗಾರರನ್ನು  ಬಂಧಿಸಿದ ಎನ್ ಐಎ| ಅಮಾನವೀಯ ಎಂದ ಮಾನವ ಹಕ್ಕುಗಳ ಸಂಸ್ಥೆ

activist
Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಂಚಿ (09-10-2020): 2018ರ ಮಹಾರಾಷ್ಟ್ರದ ಕೋರೆಗಾಂವ್ ಪ್ರಕರಣದಲ್ಲಿ ಎನ್ ಐಎ 83ವರ್ಷದ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿಯನ್ನು ಬಂಧಿಸಿದೆ.

ಆಗಸ್ಟ್ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 83 ವರ್ಷದ ಜೆಸ್ಯೂಟ್ ಪಾದ್ರಿಯನ್ನು ಎನ್‌ಐಎ ಪ್ರಶ್ನಿಸಿತ್ತು.

ಬಂಧನದ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಆಘಾತವನ್ನು ವ್ಯಕ್ತಪಡಿಸಿದೆ ಮತ್ತು ಅಧಿಕಾರಿಗಳ ವರ್ತನೆ ಅಮಾನವೀಯ ಎಂದು ಹೇಳಿದೆ.

ಎಲ್ಗರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣವು ಜನವರಿ 1, 2018 ರಂದು ಭೀಮಾ-ಕೋರೆಗಾಂವ್ ಯುದ್ಧದ 200 ನೇ ವಾರ್ಷಿಕೋತ್ಸವವನ್ನು ಆಚರಿಸಲು ದಲಿತ ಸಮುದಾಯದ ಸದಸ್ಯರು ಜಮಾಯಿಸಿದ ವೇಳೆ ಹಿಂಸಾಚಾರ ನಡೆದಿತ್ತು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು