ಪಿಎಫ್ ಐ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದ ಬಸವರಾಜ್ ಬೊಮ್ಮಯಿ

basvaraj bommai
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(19-02-2021): ಆರೆಸ್ಸೆಸ್ ವಿರುದ್ಧ ಮಾತನಾಡಿದ ಪಿಎಫ್ ಐ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

 ವಿಧಾನಸೌಧದದಲ್ಲಿ ಮಾತನಾಡಿದ ಬೊಮ್ಮಯಿ, ಉಲ್ಲಾಳದಲ್ಲಿ PFI ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕವಾಗಿದೆ. ಆರ್ ಎಸ್ ಎಸ್ ಸಂಘಟನೆ ಒಂದು ದೇಶಭಕ್ತಿಯ ಸಂಘಟನೆ. ರಾಮ ಮಂದಿರ ನಿರ್ಮಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಬಗ್ಗೆ PFI ನಾಯಕರು ಮಾತನಾಡಿರುವುದು ಆಕ್ಷೇಪಾರ್ಹವಾಗಿದೆ ಎಂದು ಬೊಮ್ಮಯಿ ಹೇಳಿದ್ದಾರೆ.

ಪಿಎಫ್ ಐ ದೇಶದ ಜನತೆಯನ್ನು ಒಡೆಯುವ ಹೇಳಿಕೆ ನೀಡಿದೆ ಎಂದ ಬೊಮ್ಮಯಿ ಆರೆಸ್ಸೆಸ್ ವಿರುದ್ಧ ಮಾತನಾಡಿದ್ದಕ್ಕೆ ಆಕ್ರೋಶಗೊಂಡಿದ್ದಾರೆ.

ಇತ್ತೀಚೆಗೆ ಪಿಎಫ್ ಐ ಡೇ ಅಂಗವಾಗಿ ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಫ್ ಐ ನಾಯಕರು ಆರೆಸ್ಸೆಸ್ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದರು, ಇಡಿ, ಎನ್ ಐಎ, ಯುಎಪಿಎ ಕಾಯ್ದೆಗಳ ದುರ್ಬಳಕೆ ಬಗ್ಗೆ ಉಲ್ಲೇಖಿಸಿದ್ದರು. ದೇಶದ ಪ್ರಸ್ತುತ ಸಮಸ್ಯೆ, ತಾರತಮ್ಯಯುತ ಆಡಳಿತದ ಬಗ್ಗೆ ಗಮನ ಸೆಳೆದಿದ್ದರು. ಇದು ಆರೆಸ್ಸೆಸ್ ಮತ್ತು ಬಿಜೆಪಿಯ ಕಣ್ಣು ಕೆಂಪಾಗಿಸಿತ್ತು.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು