ಮನೆಯಲ್ಲಿ ಕೂಡ ಮಹಿಳೆಯರು ಸೇಫ್ ಅಲ್ಲ; ಮೂವರು ಸಹೋದರಿಯರ ಮೇಲೆ ಆಯಸಿಡ್ ದಾಳಿ|  ಯೋಗಿ ರಾಜ್ಯದ ಕರಾಳ ಮುಖ ಇದು!

crime
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(13-10-2020): ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಮಧ್ಯರಾತ್ರಿ ಮಲಗಿದ್ದ ಮೂವರು ಸಹೋದರಿಯರ ಮೇಲೆ ವ್ಯಕ್ತಿಯೋರ್ವ ಆಯಸಿಡ್ ಎರಚಿರುವ ಆಘಾತಕಾರಿ ಘಟನೆ ನಡೆದಿದೆ.

8ವರ್ಷದ, 12ವರ್ಷದ ,17 ವರ್ಷದ ಮೂವರು ಸಹೋದರಿಯರು ಒಂದೇ ಮನೆಯಲ್ಲಿ ಕಿಟಕಿಯನ್ನು ತೆರೆದು ಮಲಗಿದ್ದರು. ಕಿಟಕಿಯಿಂದಲೇ ಅವರ ಮೇಲೆ ಆಯಸಿಡ್ ಎರಚಲಾಗಿದೆ. ಘಟನೆಯಲ್ಲಿ ಓರ್ವಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಮೂವರನ್ನು ಕೂಡ ಗೋಂಡಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪರಸ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಆದರೆ ಅಪರಾಧಿಯನ್ನು ಈವರೆಗೆ ಪೊಲೀಸರು ಬಂಧಿಸಿಲ್ಲ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು