ಟ್ರಕ್ ನೊಳಗೆ ಸುಟ್ಟು ಕರಕಲಾದ  ಡ್ರೈವರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಜಸ್ಥಾನ (03-10-2020): ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಅಪಘಾತದ ನಂತರ ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 46 ವರ್ಷದ ವ್ಯಕ್ತಿ ಬೆಂಕಿಯಲ್ಲಿ ಬೆಂದು ಹೋಗಿದ್ದಾನೆ.

ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಟ್ರಕ್, ನಿಲ್ಲಿಸಿದ್ದ ವಾಹನವೊಂದರ ಹಿಂಭಾಗಕ್ಕೆ ನುಗ್ಗಿ ಬೆಂಕಿ ಕಾಣಿಸಿಕೊಂಡಿತ್ತು. 46 ವರ್ಷದ ಚಾಲಕ ಲಾರಿಯ ಕ್ಯಾಬಿನ್ ಒಳಗೆ ಸಿಕ್ಕಿಹಾಕಿಕೊಂಡ ಪರಿಣಾಮ ಅಲ್ಲೇ ಸುಟ್ಟು ಕರಕಲಾಗಿದ್ದಾನೆ.

 ಚುರು ಜಿಲ್ಲೆಯ ನಿವಾಸಿ ಶಂಕರ್‌ಲಾಲ್ ಮಾಲಿ ಚಾಲನೆ ಮಾಡುತ್ತಿದ್ದ ವಾಹನವು ಬುಂಡಿ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಗಂಜ್ ಗ್ರಾಮದ ಬಳಿ ಎನ್‌ಎಚ್ 52 ರಲ್ಲಿ ರಸ್ತೆಬದಿಯ ಹೋಟೆಲ್ ಹೊರಗೆ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಶೋಕತ್ ಅಲಿ ಖಾನ್ ತಿಳಿಸಿದ್ದಾರೆ.

ಇಂದು ಮರಣೋತ್ತರ ಪರೀಕ್ಷೆಯ ನಂತರ ಟ್ರಕ್ ಚಾಲಕನ ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು