ಮಂಗಳೂರು(27/10/2020):ಉಳ್ಳಾಲದ ಸಮೀಪದ ತೊಕ್ಕೋಟ್ಟುವಿನಲ್ಲಿ ಟ್ರಕ್ ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ನವದಂಪತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬಜಾಲ್ ನಿವಾಸಿ ರಯಾನ್ ಫೆರ್ನಾಂಡಿಸ್ (35) ಮತ್ತು ಪ್ರಿಯಾ ಫೆರ್ನಾಂಡಿಸ್ (32) ಅಪಘಾತದಿಂದ ಮೃತಪಟ್ಟವರು. ಇವರು ಕಂಕನಾಡಿ ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಸಿಬ್ಬಂದಿಯಾದ್ದಾರೆ. ಇತ್ತೀಚೆಗಷ್ಟೇ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.
ಡ್ಯೂಟಿ ಮುಗಿಸಿ ಇಬ್ಬರೂ ಉಳ್ಳಾಲದ ಬಂಗೇರಲೇನ್ ನಲ್ಲಿರುವ ಬಾಡಿಗೆ ಮನೆಗೆ ತೆರಳುತ್ತಿದ್ದರು. ತೊಕ್ಕೋಟ್ಟು ಫ್ಲೈಓವರ್ ಬಳಿ ಅತಿ ವೇಗವಾಗಿ ಬಂದ ಟ್ರಕ್ ಢಿಕ್ಕಿ ಹೊಡೆದು, ಬೈಕ್ ಟ್ರಕ್ ಅಡಿಗೆ ಸಿಲುಕಿಕೊಂಡು, ಎಳೆದುಕೊಂಡು ಹೋದ ಪರಿಣಾಮ ದಂಪತಿಗಳು ದಾರುಣವಾಗಿ ಮೃತಪಟ್ಟಿದ್ದಾರೆ.