ಗದಗ (25-11-2020): ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಗದಗ ರಸ್ತೆಯ ದುಂದೂರ ಕ್ರಾಸ ಬಳಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಗಂಗಣ್ಣ(52), ನಾಗಮ್ಮ(48), ಈರಣ್ಣ(24) ಹನುಮಂತ (37) ಮೃತ ದುರ್ದೈವಿಗಳು. ಪಾರ್ಶ್ವವಾಯು ಚಿಕಿತ್ಸೆಗಾಗಿ ಕಾರವಾರ ತಾಲ್ಲೂಕಿನ ಹಳಗಾ ಗ್ರಾಮಕ್ಕೆ ಇವರು ತೆರಳುತ್ತಿದ್ದರು. ಈ ವೇಳೆ ಕಾರು ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದರ್ಘಟನೆ ನಡೆದಿದೆ.
ಗಾಯಗೊಂಡ ಇಬ್ಬರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.