13 ಜಿಲ್ಲೆಗಳ 61 ತಾಲೂಕುಗಳು ಪ್ರವಾಹ ಪೀಡಿತ: ಸರ್ಕಾರ ಘೋಷಣೆ; ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಜಿಲ್ಲೆಗಳಲ್ಲಿ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ನಿಯಮಗಳ ಪ್ರಕಾರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ.ಪ್ರವಾಹ ಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದ ಪುಟ್ಟಿ ಕೆಳಗಿನಂತಿವೆ.

  1. ದಾವಣಗೆರೆ-ಹರಿಹರ, ಹೊನ್ನಾಳಿ ನ್ಯಾಮತಿ
  2. ರಾಯಚೂರು: ದೇವದುರ್ಗ, ರಾಯಚೂರು, ಲಿಂಗಸಗೂರು
  3. ಬೆಳಗಾವಿ: ಅಥಣಿ, ಗೋಕಾಕ್, ಚಿಕ್ಕೋಡಿ, ಬೈಲ್ ಹೊಂಗಲ್, ಹುಕ್ಕೇರಿ, ಖನಾಪುರ್, ರಾಮದರ್ಗ, ಸವದತ್ತಿ, ಕಿತ್ತೂರು, ನಿಪ್ಪಾಣಿ ಕಾಗವಾಡ, ರಾಯಭಾಗ, ಮೂಡಲಗಿ
  4. ಬಾಗಲಕೋಟೆ- ಬಾದಾಮಿ, ಬಾಗಲಕೋಟೆ,ಗುಳೆದಗುಡ್ಡ,ಬೀಳಗಿ, ಹುನಗುಂದ, ಇಳಕಲ್ ,ಜಮಖಂಡಿ ಮುಧೋಳ್ ರಬಕವಿ- ಬನಹಟ್ಟಿ
  5. ಗದಗ- ನರಗುಂದ, ರೋಣ
  6. ಹಾವೇರಿ- ಬ್ಯಾಡಗಿ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿಗ್ಗಾವಿ, ಹಿರೆಕೇರೂರು, ಹಾನಗಲ್.ರಟ್ಟಿಹಳ್ಳಿ
  7. ಧಾರವಾಡ: ಕಲಘಟಗಿ, ಧಾರವಾಡ, ಕುಂದಗೋಳ, ನವಲಗುಂದ ಅಳ್ನಾವರ್
  8. ಶಿವಮೊಗ್ಗ: ಸಾಗರ, ಶಿವಮೊಗ್ಗ, ಶಿಕಾರಿಪುರ, ಸೊರಬ
  9. ಹಾಸನ – ಸಕಲೇಶಪುರ
  10. ಕೊಡಗು – ಮಡಿಕೇರಿ
  11. ಉತ್ತರ ಕನ್ನಡ- ಅಂಕೋಲ ಹಳಿಯಾಳ, ಸಿದ್ದಾಪುರ, ಶಿರಸಿ, ಕಾರವಾರ, ಕುಮಟ, ಯಲ್ಲಾಪುರ.
  12. ಚಿಕ್ಕಮಗಳೂರು: – ಎನ್ ಆರ್. ಪುರ
  13. ಯಾದಗಿರಿ- ಶಹಾಪುರ, ಶೊರಾಪುರ, ವಡಗೇರಾ, ಹುಣಸಗಿ
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು