ಉತ್ತರ ಪ್ರದೇಶ(02-11-2020): ಅಕ್ಟೋಬರ್ 24 ಮತ್ತು 26 ರ ನಡುವೆ ಉತ್ತರ ಪ್ರದೇಶದ ಸರ್ಕಾರಿ ಸ್ವಾಮ್ಯದ ಶಿಶುಪಾಲನಾ ಕೇಂದ್ರದಲ್ಲಿ ಮೂರು ಶಿಶುಗಳು ಅಪೌಷ್ಟಿಕತೆಯಿಂದ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ನಾಲ್ಕು ತಿಂಗಳ ಸುನೀತಾ ಎಂಬ ಶಿಶು ಅಕ್ಟೋಬರ್ 24 ರಂದು ಎಸ್ಎನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದೆ. ಮೂರು ತಿಂಗಳ ಪ್ರಭಾ ಮತ್ತು ಎರಡು ತಿಂಗಳ ಅವನಿ ಅಕ್ಟೋಬರ್ 25 ರಂದು ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದೆ. ಈ ಶಿಶುಗಳಿಗೆ ಪಾಲನಾ ಕೇಂದ್ರದಲ್ಲಿ ಸಾಕಷ್ಟು ಪೌಷ್ಠಿಕಾಂಶವನ್ನು ನೀಡುತ್ತಿಲ್ಲ ಎನ್ನುವುದು ಬಹಿರಂಗವಾಗಿದೆ.
ಪ್ರಸ್ತುತ, ಇಬ್ಬರು ಕಾರ್ಮಿಕರು ದಿನಕ್ಕೆ ಶಿಪ್ಟ್ ನಲ್ಲಿ 44 ಮಕ್ಕಳನ್ನು ನೋಡಿಕೊಳ್ಳುತ್ತಾರೆ.ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸೆಪ್ಟೆಂಬರ್ ಮಧ್ಯದಲ್ಲಿ ಸಿರೋಲಿ ಗ್ರಾಮ ಕೇಂದ್ರದಲ್ಲಿ ತಪಾಸಣೆ ನಡೆಸಿದ್ದರು. ಆಗ 13 ಮಕ್ಕಳು ಇದ್ದರು, ಎಲ್ಲರೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರಿಗೆ ಸರಿಯಾದ ಆರೈಕೆ ಅಥವಾ ಪೌಷ್ಠಿಕಾಂಶದ ಕೊರತೆಯನ್ನು ಉಲ್ಲೇಖಿಸಿ ಅವರು ಜಿಲ್ಲಾ ಪರೀಕ್ಷಾಧಿಕಾರಿಗೆ (ಡಿಪಿಒ) ಪತ್ರ ಕಳುಹಿಸಿದ್ದರು.