2024ರಲ್ಲಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧೆ : ಟಿಎಂಸಿ ಸ್ಪಷ್ಟನೆ 

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ: ಪ್ರಧಾನಿ ಮೋದಿಯವರೇ 2024ರ ಚುನಾವಣೆಯಲ್ಲಿ ಸೇಫ್ ಆಗಿರೋ ಮತ್ತೊಂದು ಕ್ಷೇತ್ರವನ್ನು ಹುಡುಕಿಕೊಳ್ಳಿ. ಯಾಕಂದ್ರೆ ವಾರಣಾಸಿಯಲ್ಲಿ ನಿಮ್ಮ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಅನ್ನೋ ಬಿಸಿ ಬಿಸಿ ಚರ್ಚೆಗಳು ಜೋರಾಗಿ ನಡೀತಿವೆ. ಇದಕ್ಕೆ ಕಾರಣ ನಿನ್ನೆ ಪ್ರಧಾನಿ ಮೋದಿ ಮಮತಾ ವಿರುದ್ಧ ಟೀಕೆ ಮಾಡುವಾಗ, ನಂದಿಗ್ರಾಮದಲ್ಲಿ ಸೋಲಿನ ಅರಿವಾಗಿರೋ ಮಮತಾ ಬ್ಯಾನರ್ಜಿ ಮತ್ತೊಂದು ಕ್ಷೇತ್ರದಿಂದ ಕಣಕ್ಕಿಳೀತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಇದು ನಿಜಾನಾ ಅಂತ ಪ್ರಶ್ನೆ ಮಾಡಿದ್ರು.

ಇದಕ್ಕೆ ಇವತ್ತು ತಿರುಗೇಟು ಕೊಟ್ಟಿರೋ ತೃಣಮೂಲ ಕಾಂಗ್ರೆಸ್ “ದೀದಿ ನಂದಿಗ್ರಾಮ್ ಗೆದ್ದಿದ್ದಾರೆ.
ಮತ್ತೊಂದು ಸೀಟಿನಿಂದ ಅವರ ಹೋರಾಟದ ಪ್ರಶ್ನೆ ಉದ್ಭವಿಸುವುದಿಲ್ಲ. ನರೇಂದ್ರ ಮೋದಿಯವರೇ ನಾಮನಿರ್ದೇಶನದ ಅಂತ್ಯದೊಂದಿಗೆ ನಿಮ್ಮ ಸುಳ್ಳನ್ನು ಜನರು ನೋಡುವ ಮೊದಲು ಜನರನ್ನು ದಾರಿ ತಪ್ಪಿಸುವ ನಿಮ್ಮ ಪ್ರಯತ್ನಗಳಿಂದ ಹಿಂದೆ ಸರಿಯಿರಿ.
2024 ರಲ್ಲಿ ಸುರಕ್ಷಿತವಾಗಿರುವ ಕ್ಷೇತ್ರವನ್ನು ನೋಡಿಕೊಳ್ಳಿ. ಏಕೆಂದರೆ ನಿಮಗೆ ವಾರಣಾಸಿಯಲ್ಲಿ ಸವಾಲು ಬರುತ್ತದೆ. ನಿಮ್ಮ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ” ಎಂದು ಟಿಎಂಸಿ ಟ್ವೀಟ್ ಮಾಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು