ಮಹಿಳೆಯನ್ನು ಕೊಂದು ಆಕೆಯ ಹೃದಯವನ್ನು ಆಲೂಗಡ್ಡೆಯ ಜೊತೆಗೆ ಬೇಯಿಸಿ ತಿಂದ ಕಿಲ್ಲರ್

heart

ವಾಷಿಂಗ್ಟನ್ (25-02-2021): ಸೈಕೋ ಕಿಲ್ಲರ್ ಓರ್ವ ಮಹಿಳೆಯೋರ್ವಳನ್ನು ಹತ್ಯೆ ಮಾಡಿದ ಬಳಿಕ ಆಕೆಯ ಹೃದಯವನ್ನು ತನ್ನ ಚಿಕ್ಕಪ್ಪ, ಚಿಕ್ಕಮ್ಮನಿಗೆ ಉಣಬಡಿಸಿ ಬಳಿಕ ಮತ್ತೆ ಎರಡು ಕೊಲೆ ಮಾಡಿದ್ದಾನೆ. ಈ ಭಯಾನಕ ಘಟನೆ ನಡೆದಿರುವುದು ಅಮೆರಿಕಾದ ಒಕ್ಲಹೋಮದಲ್ಲಿ. ಲಾರೆನ್ಸ್ ಪಾಲ್ ಆ್ಯಂಡರ್ಸನ್  ಈ ಪ್ರಕರಣದ ವಿಲನ್ ಆಗಿದ್ದಾರೆ. ಮಹಿಳೆಯನ್ನು ಕೊಂದ ಬಳಿಕ ಆಕೆಯ ಹೃದಯವನ್ನು ಕತ್ತರಿಸಿದ  ಲಾರೆನ್ಸ್,  ಬಳಿಕ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ, ಆಲೂಗಡ್ಡೆಯ ಜೊತೆಗೆ ಬೇಯಿಸಿ ಚಿಕ್ಕಪ್ಪ, ಚಿಕ್ಕಮ್ಮನಿಗೆ ಉಣಬಡಿಸಿದ್ದಾನೆ. ಊಟದ ಬಳಿಕ … Read more

ವಿಟ್ಲದಲ್ಲಿ ಭೀಕರ ಅಪಘಾತ: ಬೆಳ್ತಂಗಡಿ ನಿವಾಸಿ ಯುವಕ ಮೃತ್ಯು, ತಂದೆ ಗಂಭೀರ

ACCIDENT

ವಿಟ್ಲ(25-02-2021): ಬೈಕ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲದ  ಬದನಾಜೆಯಲ್ಲಿ ನಡೆದಿದೆ. ಬೈಕ್ ಸವಾರ ಬೆಳ್ತಂಗಡಿ ನಿವಾಸಿ ರಶೀದ್ ಮೃತ ದುರ್ದೈವಿ. ಪುತ್ತೂರಿನಿಂದ ವಿಟ್ಲಕ್ಕೆ ಬರುತ್ತಿದ್ದ ಲಾರಿ  ಬೈಕ್ ಗೆ ಢಿಕ್ಕಿ ಹೊಡೆದಿದೆ. ರಶೀದ್ ತಂದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.      

OTT, ಡಿಜಿಟಲ್ ಮಾದ್ಯಮಗಳ ಗೈಡ್ ಲೈನ್ಸ್ ಬಿಡುಗಡೆ: ಇಲ್ಲಿದೆ ಮಹತ್ವದ ಅಂಶಗಳು

DIGITAL

ನವದೆಹಲಿ(25-02-2021): ಸೋಶಿಯಲ್ ಮೀಡಿಯಾ ಮತ್ತು ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳ ಮಾರ್ಗಸೂಚಿಗಳನ್ನು ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಗುರುವಾರ ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿಶಂಕರ್ ಪ್ರಸಾದ್, ಸಾಮಾಜಿಕ ಮಾಧ್ಯಮವು ವ್ಯಾಪಾರ ಮಾಡಲು ಸ್ವಾಗತಾರ್ಹ ಆದರೆ ನಾಗರಿಕರ ಅಸ್ತಿತ್ವದ ಘನತೆಯನ್ನು ಮೀರಿಸಬಾರದು ಎಂದು ಹೇಳಿದರು. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ದುರುಪಯೋಗದ ಬಗ್ಗೆ ಹಲವಾರು ದೂರುಗಳು ಇವೆ. ಅಂತೆಯೇ, ಡಿಜಿಟಲ್ ಸುದ್ದಿ ಪೋರ್ಟಲ್‌ಗಳನ್ನು ಮುದ್ರಣ ಮಾಧ್ಯಮದಂತೆಯೇ ನಡೆಸಲಾಗುವುದು ಎಂದು ಜಾವಡೇಕರ್ ಹೇಳಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಉತ್ಸಾಹ … Read more

ಪಿ ಎಫ್ ಐ ಕಾರ್ಯಕರ್ತರ ಬಂಧನ ಖಂಡಿಸಿ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ವತಿಯಿಂದ ವಿವಿಧ ಕಡೆ ಪ್ರತಿಭಟನೆ

pfi

ಬೆಳ್ತಂಗಡಿ(25-02-2021): ಸಂಘಟನಾ ಕಾರ್ಯವೈಖರಿಯಲ್ಲಿ ನಿರತರಾಗಿದ್ದ ಇಬ್ಬರು ಪಿ ಎಫ್ ಐ ಕಾರ್ಯಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಬೆಳ್ತಂಗಡಿ ಜಿಲ್ಲಾ ವತಿಯಿಂದ ಕಕ್ಕಿಂಜೆ, ಉಜಿರೆ, ಬೆಳ್ತಂಗಡಿ, ಕಾಜೂರು, ಗುರುವಾಯನಕೆರೆ, ಕನ್ನಡಿಕಟ್ಟೆ, ಪಿಳ್ಯ, ಪಡ್ಡಂದಡ್ಕ, ಮದ್ದಡ್ಕ, ಮಡಂತ್ಯಾರು, ಪುಂಜಾಲಕಟ್ಟೆ, ಪಾಂಡವರಕಲ್ಲು, ಮೂರುಗೋಳಿ, ಬಂಗೇರಕಟ್ಟೆ, ಕುದ್ರಡ್ಕ, ವಾಮದಪದವು ಮತ್ತು ಎನ್ ಸಿ ರೋಡ್ ಸೇರಿದಂತೆ 17 ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ ಘೋಷಣೆ … Read more

ತಬ್ಲಿಘಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 49 ವಿದೇಶಿಗರಿಗೆ ದಂಡ ಕಟ್ಟುವಂತೆ ಸೂಚನೆ

ಲಕ್ನೋ(25-02-2021): ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ 49 ವಿದೇಶಿ ಪ್ರಜೆಗಳಿಗೆ ಲಕ್ನೋ ನ್ಯಾಯಾಲಯ ತಲಾ 1,500 ರೂ. ದಂಡ ವಿಧಿಸಿದೆ. 49 ವಿದೇಶಿಯರು ಥೈಲ್ಯಾಂಡ್, ಕಿರ್ಗಿಸ್ತಾನ್, ಖಝಕಿಸ್ತಾನ್ ಮತ್ತು ಬಾಂಗ್ಲಾದೇಶದಿಂದ ಉತ್ತರ ಪ್ರದೇಶವನ್ನು ತಲುಪಿದ್ದರು.ಕೇಂದ್ರ ಮತ್ತು ರಾಜ್ಯದ ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪ ಅವರ ಮೇಲಿತ್ತು. ಲಖನೌ ಮತ್ತು ಬಹ್ರೇಚ್, ಸೀತಾಪುರ ಮತ್ತು ಭಾದೋಹಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಐಪಿಸಿ ವಿಭಾಗಗಳು … Read more

ಮಸೀದಿಯ ಕಾಣಿಕೆ ಹುಂಡಿಗೆ ಬೆಂಕಿ: ನೋಟುಗಳು ಸುಟ್ಟು ಭಸ್ಮ

police

ದಾವಣಗೆರೆ(25-02-2021): ದರ್ಗಾವೊಂದರ ಕಾಣಿಕೆ ಹುಂಡಿಗೆ ಬೆಂಕಿಬಿದ್ದು ನೋಟುಗಳು ಸುಟ್ಟು ಹೋಗಿರುವ ಘಟನೆ ದೊಡ್ಡಬಾತಿಯ ಚಮಶಾವಳಿ ದರ್ಗಾದಲ್ಲಿ ನಡೆದಿದೆ. ದರ್ಗಾದ ಕಾಣಿಕೆ ಹುಂಡಿಗೆ ಹೇಗೆ ಬೆಂಕಿ ಬಿದ್ದಿದೆ ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲನೆ ನಡೆಸಿದ್ದಾರೆ.        

ತಹಶೀಲ್ದಾರ್ ಗೆ ಸೀಮೆ ಎಣ್ಣೆ ಸುರಿದು ಕಚೇರಿಯಲ್ಲೇ ಬೆಂಕಿ ಹಚ್ಚಲು ಯತ್ನ

arrest

ಬಾಗಲಕೋಟೆ(25-02-2021): ಆಸ್ತಿ ಪತ್ರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಗೆ ಸೀಮೆ ಎಣ್ಣೆ ಸುರಿದು ತಂದೆ-ಮಗ ಬೆಂಕಿಹಚ್ಚಲು ಪ್ರಯತ್ನಿಸಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ. ಲಕ್ಷ್ಮಣ ಹಾಗೂ ಅವರ ಪುತ್ರ ಬಸವರಾಜ ಆರೋಪಿಗಳು. ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಬಿರಡಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲು ಯತ್ನಿಸಿದ್ದಾರೆ. ತಕ್ಷಣ ತಹಶೀಲ್ದಾರ್ ಕಚೇರಿಯಿಂದ ಹೊರಗ ಓಡಿ ಬಂದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ರೈತ ಲಕ್ಷ್ಮಣ 2016ರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ಸರ್ವೆ ನಂ.190/2ರಲ್ಲಿರುವಂತ 4 ಎಕರೆ, 16 … Read more

‘ಗೋಡ್ಸೆ ಭಕ್ತ’ ಬಾಬುಲಾಲ್ ಕಾಂಗ್ರೆಸ್ ಗೆ ಸೇರ್ಪಡೆ

madya pradesh

ನವದೆಹಲಿ(25-02-2021):ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ‘ಗೋಡ್ಸೆ ಭಕ್ತ’ ಬಾಬುಲಾಲ್ ಚೌರಾಸಿಯಾ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅವರನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಗೋಡ್ಸೆ ಬಗ್ಗೆ ಬಿಜೆಪಿಯ ಸಾಧ್ವಿ ಪ್ರಜ್ಞಾ ನಿಲುವಿನ ಬಗ್ಗೆ ಕಾಂಗ್ರೆಸ್ ಈ ಮೊದಲು ವಾಗ್ದಾಳಿ ನಡೆಸಿತ್ತು. ಈಗ ಚೌರೇಶಿಯಾ ಅವರನ್ನು ಸೇರಿಸಿಕೊಳ್ಳುವಲ್ಲಿ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ಟೀಕೆ ಭುಗಿಲೆದ್ದಿದೆ. 2019 ರಲ್ಲಿ ಹಿಂದೂ ಮಹಾಸಭಾ ಗ್ವಾಲಿಯರ್‌ನಲ್ಲಿ ಗೋಡ್ಸೆಯ 70 ನೇ ತ್ಯಾಗ ದಿನವನ್ನು ಆಚರಿಸಿದೆ. ಬಳಿಕ ಬಲಪಂಥೀಯ ಸಂಘಟನೆಯು 2017 … Read more

ಸಿಂಗು ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ನಾಪತ್ತೆ

ನವದೆಹಲಿ(25-02-2021):  ಎಕೋಲಹಾ ಗ್ರಾಮದ 75 ವರ್ಷದ ಜೊರಾವರ್ ಸಿಂಗ್ ಅವರು ಗಣರಾಜ್ಯೋತ್ಸವದಿನದಿಂದ ಕಾಣೆಯಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್ 1 ರಿಂದ ಪಂಜಾಬ್‌ನಲ್ಲಿ ರೈಲು ರೋಕೊ ಪ್ರಾರಂಭವಾದಾಗಿನಿಂದ ಅವರು ರೈತರ ಪ್ರತಿಭಟನೆಯ ಭಾಗವಾಗಿದ್ದರು. ಜನವರಿ 26 ರವರೆಗೆ, ರೈತ ತನ್ನ ಮಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು ಆದರೆ ಆ ಬಳಿಕ ನಾಪತ್ತೆಯಾಗಿದ್ದಾರೆ. ಸಿಂಗ್ ಮತ್ತು ಟಿಕ್ರಿ ಗಡಿಯಲ್ಲಿ ಜೊರಾವರ್ ಸಿಂಗ್ ಮಗಳು ಪರಮ್‌ಜೀತ್ ಕೌರ್ ತನ್ನ ತಂದೆಯ ಬಗ್ಗೆ ಮಾಹಿತಿ ಇರುವ ಮತ್ತು ಪತ್ತೆಗೆ ಸಹಾಯ ಮಾಡುವಂತೆ ಜನರನ್ನು ಕೋರಿ … Read more

ದಲಿತ ವರನ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಿದ ಸವರ್ಣೀಯರು

groom dalith

ಗುಜರಾತ್(25-02-2021): ವಿವಾಹದಲ್ಲಿ ದಲಿತ ವರ ಸಾಂಪ್ರದಾಯಿಕ ಟೋಪಿ ಧರಿಸಿದಕ್ಕೆ ಗುಜರಾತ್‌ನ ಅರಾವಲಿ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಸವರ್ಣೀಯರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೆರವಣಿಗೆಯಲ್ಲಿ ವರನ ಕೆಲವು ಸಂಬಂಧಿಕರು ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿದ್ದರು, ಈ ಕಾರಣದಿಂದಾಗಿ ಸವರ್ಣಿಯರು ದಬ್ಬಾಳಿಕೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಕಾರ, ಈವರೆಗೆ 9 ಜನರನ್ನು ಬಂಧಿಸಲಾಗಿದೆ ಎಂದು ಜನಸತ್ತಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮದುವೆ ಮೆರವಣಿಗೆ ಆರಂಭದ ತಕ್ಷಣವೇ ಕಲ್ಲು ತೂರಾಟ ಪ್ರಾರಂಭವಾಯಿತು. … Read more