ಮುಖ್ಯಮಂತ್ರಿ ವಿರುದ್ಧ ಪ್ರಧಾನಿಗೆ ಪತ್ರ | ಶಾಸಕನನ್ನು ಉಚ್ಛಾಟಿಸಿದ ಬಿಜೆಪಿ

  ಡೆಹ್ರಾಡೂನ್​(13/11/2020): ಮುಖ್ಯಮಂತ್ರಿ ವಿರುದ್ಧ ಪ್ರಧಾನಿ‌ ನರೇಂದ್ರ ಮೋದಿಯವರಿಗೆ ದೂರು ಸಲ್ಲಿಸಿದ ಮಾಜಿ‌ ಸಚಿವನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದ ಘಟನೆ ನಡೆದಿದೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಲಖಿ ರಾಮ್ ಜೋಶಿ‌ ಮುಖ್ಯಮಂತ್ರಿ ವಿರುದ್ಧ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ದೂರು ಸಲ್ಲಿಸಿದವರು. ಅವರ ತಮ್ಮ ಪತ್ರದಲ್ಲಿ ‘ಮುಖ್ಯಮಂತ್ರಿ ತ್ರಿವೇಂದ್ರ‌ ಸಿಂಗ್ ರಾವತ್ ಅವರು ಪಕ್ಷದ ಮೌಲ್ಯಕ್ಕೆ ಧಕ್ಕೆ‌ತರುವ ಕೆಲಸ ಮಾಡುತ್ತಿದ್ದಾರೆ. ಕಪ್ಪು ಹಣ ಸಂಗ್ರಹಿಸುತ್ತಿದ್ದಾರೆ. ಅವರ ವಿರುದ್ಧ ಸಿಬಿಐ … Read more

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್ ಕುಮಾರ್ / ರಾಜ್ಯಪಾಲರಿಂದ ರಾಜೀನಾಮೆ ಅಂಗೀಕಾರ

nithish kumar

ಪಾಟ್ನಾ(13/11/2020): ಮೊನ್ನೆ ಪ್ರಕಟಗೊಂಡಿರುವ ಬಿಹಾರದ ಚುನಾವಣಾ ಫಲಿತಾಂಶದಲ್ಲಿ ಎನ್ ಡಿಎ ಬಹುಮತ ಪಡೆದಿರುವುದು ಈಗ ಹಳೆಯ ಸುದ್ದಿ. ಆದರೆ, ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ನೂತನ ಸರ್ಕಾರ ರಚನೆಯಾಗುವವರೆಗೆ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.  ನಿತೀಶ್ ಕುಮಾರ್ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಾಲಿ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯ ಮಾಡಲಾಗಿದೆ. ಭಾನುವಾರ ನಡೆಯುವ ಎನ್ ಡಿ ಎ ಶಾಸಕರ ಸಭೆಯಲ್ಲಿ  … Read more

ಬಿಹಾರ ಚುನಾವಣಾ ಫಲಿತಾಂಶದಲ್ಲಿ ಸಂಶಯವಿದೆ; ಸಂಸದ ಡಿ.ಕೆ.ಸುರೇಶ್

ಬೆಂಗಳೂರು(13/11/2020): ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲಿ ಇವಿಎಂ ಮೇಲೆ ದುರ್ಬಳಕೆ ಆರೋಪ ಕೇಳಿಬರುತ್ತಿದ್ದು, ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಬಳಸುವುದೇ ಸೂಕ್ತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕಾದಲ್ಲಿ ಈಗಲೂ ಅಧ್ಯಕ್ಷೀಯ ಚುನಾವಣೆಗೆ ಬ್ಯಾಲೆಟ್ ಪೇಪರ್ ಅನ್ನೇ ಬಳಸುತ್ತಾರೆ. ಆದರೆ, ನಮ್ಮಲ್ಲಿ ಮಾತ್ರ ಇವಿಎಂ  ಬಳಸಲಾಗುತ್ತದೆ. ಮನುಷ್ಯರು ತಯಾರಿಸಿದ ಯಂತ್ರವನ್ನು ದುರ್ಬಳಕೆ ಮಾಡುವುದು ಅಸಾಧ್ಯವೇನಲ್ಲ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ. ಮನುಷ್ಯರೇ ಮಾಡಿರುವುದರಿಂದ ಅದನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದ್ದರಿಂದ ಇವಿಎಂ … Read more

ದೀಪಾವಳಿಗೆ ಎಲ್ಲಾ ಪಟಾಕಿ ಹೊಡೆಯುವಂತಿಲ್ಲ |  ಈ ಪಟಾಕಿಗಳನ್ನು ಮಾತ್ರ ಹೊಡೆಯಬಹುದು

ಬೆಂಗಳೂರು(13/11/2020): ಇನ್ನೇನು ಸಡಗರ ಸಂಭ್ರಮದ ದೀಪಾವಳಿ ಹಬ್ಬ ಬರುತ್ತದೆ. ದೀಪಾವಳಿ ಎಂದರೆ, ಪಟಾಕಿ ಇದ್ದೇ ಇರುತ್ತದೆ. ಆದರೆ, ಈ ಬಾರಿ ಎಲ್ಲಾ‌ ನಮೂನೆಯ ಪಟಾಕಿಗಳನ್ನು ಹೊಡೆಯುವಂತಿಲ್ಲ. ಹಾಗಂತ, ರಾಜ್ಯ ಸರಕಾರ ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿದೆ. ಹೌದು. ರಾಜ್ಯ ಸರಕಾರವು ಆರಂಭದಲ್ಲಿ ಪಟಾಕಿ ನಿಷೇಧದ ಮಾತೆತ್ತಿತ್ತು. ಆದರೆ, ನಂತರ ತಣ್ಣಗಾಗಿ  ಕ್ಯೂಆರ್ ಕೋಡ್ ಮತ್ತು ಹಸಿರು ಲೋಗೊ ಹೊಂದಿರುವ ‘ಹಸಿರು ಪಟಾಕಿ’ ಬಳಕೆಗಷ್ಟೇ ಅವಕಾಶ ಕಲ್ಪಿಸಿದೆ. ರಾಜ್ಯ ಕಂದಾಯ ಇಲಾಖೆ  ಹೈಕೋರ್ಟ್‌ಗೆ ಇಂದು ಸಲ್ಲಿಸಿದ  ಪ್ರಮಾಣಪತ್ರದಲ್ಲಿ ಈ … Read more

ಹಾಲೆಂಡಿನಲ್ಲಿ ಸೌದಿ ರಾಯಭಾರಿ ಕಛೇರಿ ಮೇಲೆ ದಾಳಿ

ಅಮ್ಸ್ಟರ್ಡಮ್(12-11-2020): ಹಾಲೆಂಡಿನಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಛೇರಿ ಮೇಲೆ ಅಜ್ಞಾತ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ. ಹಲವು ಸುತ್ತುಗಳ ಗುಂಡಿನ ದಾಳಿ ನಡೆದಿದೆ. ನಲ್ವತ್ತು ವರ್ಷ ವಯಸ್ಸಿನ ದುಷ್ಕರ್ಮಿಯನ್ನು ಬಂಧಿಸಿದ್ದಾಗಿ ಡಚ್ ಪೋಲೀಸರ ಹೇಳಿಕೊಂಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಫ್ರೆಂಚ್ ರಾಜತಾಂತ್ರಿಕರ ವಿರುದ್ಧ ನಡೆದ ದಾಳಿಯ ಮರುದಿನವೇ ಹಾಲೆಂಡಿನ ಈ ಆಕ್ರಮಣ ನಡೆದಿರುವುದು ಗಮನಾರ್ಹ. ಪ್ರವಾದಿಯವರ ಕಾರ್ಟೂನ್ ರಚನೆಯ ಬಳಿಕ ಉಂಟಾದ ವಿವಾದಗಳ ಬಳಿಕ ಫ್ರೆಂಚ್ ರಾಯಭಾರಿ ಕಛೇರಿ ವಿರುದ್ಧ ದಾಳಿ ನಡೆದಿತ್ತು. ಗ್ರಾನೈಟ್ ಸ್ಫೋಟಸಿ ನಡೆಸಿದ ಈ … Read more

ಕುವೈತಿಗೆ ನೇರವಾಗಿ ಪ್ರಯಾಣಿಸಲು ಆರೋಗ್ಯ ಸಚಿವಾಲಯದ ಸಮ್ಮತಿ

ಕುವೈತ್ ಸಿಟಿ(12-11-2020) ಭಾರತ ಸೇರಿದಂತೆ ಮೂವತ್ತನಾಲ್ಕು ದೇಶಗಳ ಪ್ರಜೆಗಳಿಗೆ ನೇರವಾಗಿ ಕುವೈತಿಗೆ ಪ್ರಯಾಣಿಸಲು ನಿಷೇಧವಿತ್ತು. ಈ ದೇಶಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗವು ತೀವ್ರವಾಗಿ ಹರಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಹಲವು ಪ್ರಯಾಣಿಕರು ಯುಎಇ ಮೊದಲಾದ ದೇಶಗಳಿಗೆ ಹೋಗಿ, ಅಲ್ಲಿ ಹದಿನಾಲ್ಕು ದಿನ ತಂಗಿ, ಅಲ್ಲಿಂದ ಕುವೈತಿಗೆ ಹೋಗುತ್ತಿದ್ದರು. ಇದರಿಂದಾಗಿ ಒಂದಷ್ಟು ಸಮಯ, ಹಣ ವ್ಯಯವಾಗುತ್ತಿದ್ದಲ್ಲದೇ ಕೆಲವಾರು ಸಮಸ್ಯೆಗಳೂ ಎದುರಾಗುತ್ತಿದ್ದವು. ಈಗ ನೇರ ಪ್ರಯಾಣ ನಿಷೇಧಿಸಿದ ದೇಶಗಳಿಂದ ಪ್ರಯಾಣಿಕರು ಕುವೈತಿಗೆ ಬರಬೇಕೆಂಬ ಬೇಡಿಕೆಗೆ ಕುವೈತ್ ಆರೋಗ್ಯ … Read more

ಕತರ್: ಹೊಸ ಉದ್ಯೋಗ ವೀಸಾಗೆ ಅರ್ಜಿ ಸಲ್ಲಿಸಲು ಅನುಮತಿ

ದೋಹಾ-ಕತರ್(12-11-2020): ಹೊಸ ಉದ್ಯೋಗ ವೀಸಾದಡಿ ವಿದೇಶಿಯರನ್ನು ತರುವುದಕ್ಕಾಗಿ ಅರ್ಜಿ ಸಲ್ಲಿಸಲು ಕತರ್ ಅನುಮತಿ ನೀಡಿದೆ. ಆದರೆ ಇದು ಕಂಪೆನಿಗಳಿಗೆ ಮಾತ್ರವೇ ಅನ್ವಯವಾಗುವುದು. ಕತರಿನಲ್ಲಿ ಕೊರೋನಾ ರೋಗವು ಧೃಡಪಟ್ಟ ಮಾರ್ಚ್ ತಿಂಗಳ ಬಳಿಕ ವೀಸಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಎಂಟು ತಿಂಗಳಿನಿಂದ ಯಾವನೇ ಒಬ್ಬ ವಿದೇಶೀಯೂ ಹೊಸ ಉದ್ಯೋಗ ವೀಸಾ ಮೂಲಕ ಕತರಿಗೆ ಬಂದಿರಲಿಲ್ಲ. ಇದೀಗ ಹೊಸ ವರ್ಕಿಂಗ್ ವೀಸಾಗಳಿಗಾಗಿ ನಾಡಿದ್ದು ಆದಿತ್ಯವಾರದಿಂದ ಕಂಪೆನಿಗಳು ಅರ್ಜಿ ಸಲ್ಲಿಸಬಹುದು ಎಂದು ಕಾರ್ಮಿಕ ಸಚಿವಾಲಯವು ಪ್ರಕಟಿಸಿದೆ. ಜೊತೆಗೆ ಹೀಗೆ ಬರುವವರು ಕತರ್ … Read more

ಹೋಮ್ ಕ್ವಾರೈಂಟೈನ್ ಅವಧಿಯನ್ನು ಚಿಕಿತ್ಸಾ ಅವಧಿಯೆಂದು ಪರಿಗಣಿಸಲಾಗುವುದಿಲ್ಲ : ಒಮನ್ ಆರೋಗ್ಯ ಸಚಿವ

ಮಸ್ಕತ್(13-11-2020): ಒಮನಿಗೆ ಮರಳಿ ಬಂದ ನಂತರದ ಹೋಮ್ ಕ್ವಾರೈಂಟೈನ್ ಅವಧಿಯನ್ನು ಚಿಕಿತ್ಸಾ ಅವಧಿಯೆಂದು ಪರಿಗಣಿಸಲಾಗದು. ಹೋಮ್ ಕ್ವಾರೈಂಟೈನ ಸಮಯವನ್ನು ರಜೆಯ ಅವಧಿಯಿಂದಲೇ ವಿನಿಯೋಗಿಸಬೇಕೆಂದು ಒಮನ್ ಆರೋಗ್ಯ ಸಚಿವ ಅಹ್ಮದ್ ಅಲ್ ಸಯೀದ್ ತಿಳಿಸಿದ್ದಾರೆ. ಒಮನಿಗೆ ಹೊರಡುವ ತೊಂಭತ್ತಾರು ಗಂಟೆಗಳ ಮೊದಲು ನಡೆಸಿದ ಕೊರೋನಾ ಪರೀಕ್ಷಾ ಫಲಿತಾಂಶದ ಪ್ರಮಾಣ ಪತ್ರವನ್ನು ಪ್ರಯಾಣದ ಸಮಯದಲ್ಲಿ ಜೊತೆಗೆ ತರಬೇಕೆಂದೂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ನೆಗೆಟಿವ್ ಬಂದರೆ, ಏಳು ದಿನಗಳ ಕ್ವಾರೈಂಟೈನ್ ಇರುತ್ತದೆ. ಕ್ವಾರೈಂಟೈನ್ … Read more

” ಕನ್ನಡಿಗನಾಗುವ ಬಗೆ ಇದಲ್ಲ…. “

-ಡಾ ಕೆ ಪಿ ನಟರಾಜ ನನಗೆ ವೈಯಕ್ತಿಕವಾಗಿ ಬೆಳಗೆರೆ ಇಷ್ಟವಿರಲಿಲ್ಲ.‌ ಅವರ ಬರೆಹಗಳು ಓದುಗರನ್ನು ಹಾಳುಗೆಡವುತ್ತಿದ್ದವು. ಲಂಕೇಶ್ ಜೊತೆಗೆ ಅವರ ಜಗಳದ ಸಂದರ್ಭದಲ್ಲಿ ಅವರ ಉದ್ದಟತನ ಸಹಿಸದಾಗಿತ್ತು. ಲಂಕೇಶ್ ಅವರನ್ನು ‘ನೀವೊಂದು ವೃದ್ಧ ಹಸು ‘ ಅಂತ ಎರಡೂ ಪತ್ರಿಕೆಗಳ ವೇದಿಕೆಗಳಲ್ಲಿ ನಡೆಯುತ್ತಿದ್ದ ಜಗಳದಲ್ಲಿ ಹಂಗಿಸಿ ಕರೆದಿದ್ದು ( ಲಂಕೇಶ್ ಅಂತಹ ಲಂಕೇಶರನ್ನೇ ಕಟುವಾಗಿ ಟೀಕಿಸಬಲ್ಲೆ ಎಂದು ತನ್ನ ಓದುಗರನ್ನು ಇಂಪ್ರೆಸ್ ಮಾಡಲು ) ಅಸಹನೀಯವಾಗಿತ್ತು. ನಾನಂತೂ ಅಲ್ಲಿಂದಾಚೆಗೆ ಅವರ ಬಗ್ಗೆ ಬೇಸರಗೊಂಡೆ. ಆ ಅಹಂಕಾರದ ಹಿಂದೆ … Read more

ಮೂವರು ಮಕ್ಕಳನ್ನು ಕೊಂದು ನೇಣು ಹಾಕಿಕೊಂಡ ತಂದೆ| ದಯಾನೀಯ ಘಟನೆಗೆ ಸಾಕ್ಷಿಯಾದ ರಾಜ್ಯ ರಾಜಧಾನಿ!

ಬೆಂಗಳೂರು(13-11-2020): 3 ಮಂದಿ ಮಕ್ಕಳಿಗೆ ನೇಣುಬಿಗಿದು ಕೊಲೆ ಮಾಡಿ ತಂದೆ ಕೂಡ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದಯಾನೀಯ ಘಟನೆ ಬೆಂಗಳೂರಿನ ಮೈಕೋ ಲೇಔಟ್ ನಲ್ಲಿ ನಡೆದಿದೆ. ಜನಕರಾಜ್ ಬಿಸ್ತಾ  ಎಂಬಾತ ತನ್ನ ಮಕ್ಕಳಾದ ಸರಸ್ವತಿ (14), ಹೇಮತಿ (9) ಮತ್ತು ರಾಜಕುಮಾರ್ (3) ಇವರಿಗೆ ನೇಣುಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಜನಕರಾಜ್ ಬಿಸ್ತಾ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಕೃತ್ಯಕ್ಕೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. … Read more