ಹಣದುಬ್ಬರದಲ್ಲಿ ಅಸಹಜ ಏರಿಕೆ | ರಿಸರ್ವ್ ಬ್ಯಾಂಕಿನಿಂದ ಕಠಿಣ ಕ್ರಮಗಳ ಸಾಧ್ಯತೆ

ನವದೆಹಲಿ(12-11-2020): ಆಹಾರ ಸಾಮಾಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಚಿಲ್ಲರೆ ಹಣದುಬ್ಬರದಲ್ಲಿ ಅಸಹಜ ಏರಿಕೆ ಕಂಡಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ್ದೆಂದು ‘ಅಂಕಿಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇಲಾಖೆಯು ಪ್ರಕಟಿಸಿದ ಗ್ರಾಹಕ ಬೆಲೆ ಸೂಚ್ಯಂಕ(CPI)ದ ಅಂಕಿ ಅಂಶಗಳ ಪ್ರಕಾರ, ಕಳೆದ ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 7.61 ಶೇಕಡಾ ಇತ್ತು. 2014 ರ ಮೇ ತಿಂಗಳ ಬಳಿಕದ ಅತಿ ಹೆಚ್ಚಿನ ಚಿಲ್ಲರೆ ಹಣದುಬ್ಬರ ಇದಾಗಿದೆ. ಸೆಪ್ಟೆಂಬರ್ … Read more

ಟ್ವೀಟ್ ತಂದ ಸಂಕಷ್ಟ; ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅನುಮತಿ

kunal kamra

ಹೊಸದೆಹಲಿ(12/11/2020): ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಜೈಲು ಸೇರಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ತ್ವರಿತಗತಿಯಲ್ಲಿ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂ ಕೋರ್ಟ್ ನಡೆಯ ಕುರಿತು ಟ್ವೀಟ್ ಮಾಡಿದ್ದ ಖ್ಯಾತ ಹಾಸ್ಯ ಭಾಷಣಗಾರ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುವ ಸಾಧ್ಯತೆ ನಿಚ್ಛಳವಾಗಿದೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅನುಮತಿ ನೀಡಿರುವುದು ವರದಿಯಾಗಿದೆ. ಆತ್ಮಹತ್ಯೆಗೆ ಪ್ರಚೋಧನೆ ನೀಡಿದ್ದ ಆರೋಪದ ಮೇಲೆ ರಿಪಬ್ಲಿಕ್​ ಟಿವಿ … Read more

ಹೊಸ ಅವತಾರದಲ್ಲಿ ಮತ್ತೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ `ಪಬ್ ಜಿ’

ಹೊಸದೆಹಲಿ(12/11/2020): ನಿಷೇಧಕ್ಕೊಳಗಾಗಿದ್ದ ದಕ್ಷಿಣ ಕೊರಿಯಾ ಮೂಲದ  ಪಬ್ ಜಿ ಗೇಮ್ ಆ್ಯಪ್ ಈಗ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹೌದು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಚೀನಾದ ಇತರ ಆ್ಯಪ್ ಗಳೊಂದಿಗೆ ನಿಷೇಧಕ್ಕೊಳಗಾಗಿದ್ದ ಪಬ್‌ಜಿ ಈಗ “ಪಬ್‌ಜಿ ಮೊಬೈಲ್‌ ಇಂಡಿಯಾ’ ಹೆಸರಿನಲ್ಲಿ  ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಅದಕ್ಕಾಗಿ ಕಂಪೆನಿಯು ಭಾರತದಲ್ಲಿ ನೂರು ಮಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿದೆ ಎನ್ನಲಾಗಿದೆ. ಭಾರತದ ಮಾರುಕಟ್ಟೆಗೆ ತಕ್ಕಂತೆ ಬದಲಾವಣೆಯೊಂದಿಗೆ ಪಬ್ ಜಿ ಇಂಡಿಯಾವನ್ನು ರೂಪಿಸಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ … Read more

ಮಗಳನ್ನು ಜೈಲಿನಿಂದ ಬಿಡಿಸಲು ಕಾರು, ಪ್ಲಾಟನ್ನೇ ಮಾರಾಟಕ್ಕಿಟ್ಟ ರಾಗಿಣಿ ಪೋಷಕರು

ragini

ಬೆಂಗಳೂರು(12/11/2020): ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅವರಿಗಾಗಿ ಅವರ ಪೋಷಕರು ಕಾರನ್ನೇ ಮಾರಾಟಕ್ಕಿಟ್ಟಿದ್ದಾರೆ. ಸದ್ಯ ರಾಗಿಣಿ‌ ದ್ವಿವೇದಿ ಜೈಲಿನಲ್ಲಿದ್ದು, ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ರಾಗಿಣಿ ದ್ವಿವೇದಿಯವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಅವರ ಹೆತ್ತವರು ಈ ಹಿಂದೆ ಆರ್ಥಿಕ‌ ಸಂಕಷ್ಟದ‌ ಹಿನ್ನೆಲೆಯಲ್ಲಿ ಎರಡು ಕೋಟಿ ಮೌಲ್ಯದ ಪ್ಲಾಟನ್ನು ಮಾರಾಟಕ್ಕಿಟ್ಟಿದ್ದರು. ದುರಾದೃಷ್ಟವಶಾತ್ ಪ್ಲಾಟ್ ಮಾರಾಟಗೊಂಡಿರಲಿಲ್ಲ. ಆದ್ದರಿಂದ ಇದೀಗ ತಮ್ಮ ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಈ ಬಗ್ಗೆ ಆಯ್ದ ವಾಟ್ಸ್ ಆಪ್ … Read more

ಬಾಲಿವುಡ್ ನ ಹಿರಿಯ ನಟ ಶವವಾಗಿ ಪತ್ತೆ; ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

asif

ಧರ್ಮಶಾಲಾ​(12/11/2020): ಸುಶಾಂತ್ ಸಿಂಗ್ ಬಳಿಕ ಇದೀಗ ಇನ್ನೋರ್ವ ಪ್ರಸಿದ್ಧ ಬಾಲಿವುಡ್ ನಟ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಲಿವುಡ್ ನ ಹಿರಿಯ ನಟರಾಗಿರುವ‌ ಆಸಿಫ್ ಬಸ್ರಾ(53) ಅವರು ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಸಾವಿಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಕೆಫೆ ಬಳಿ ಆಸಿಫ್ ಅವರ ಶವ ಪತ್ತೆಯಾಗಿದೆ.

ಎನ್ ಡಿಎ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಿತು: ತೇಜಸ್ವಿ ಯಾದವ್ ಆರೋಪ; ‘ಪೋಸ್ಟಲ್ ಬ್ಯಾಲೆಟ್ ಅನ್ನು ತಿರಸ್ಕರಿಸಿದ್ದು ಯಾಕೆ?’

tejashwi yadav

ಪಾಟ್ನಾ(12/11/2020): ಪೋಸ್ಟಲ್ ಬ್ಯಾಲೆಟ್ ಅನ್ನು ಇನ್ನೊಮ್ಮೆ ಎಣಿಸಬೇಕು ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ. ಜನರು ಮಹಾಘಟಬಂಧನ್ ಪರವಾಗಿ ಮತ ಚಲಾಯಿಸಿದ್ದಾರೆ. ಆದರೆ, ಚುನಾವಣಾ ಆಯೋಗ ಎನ್ ಡಿಎ ಪರವಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ‘ನಮ್ಮ ಪರವಾಗಿ ಮತ ಚಲಾಯಿಸಿದ್ದಕ್ಕೆ ಬಿಹಾರದ ಜನತೆ ಧನ್ಯವಾದಗಳು’ ಎಂದ ತೇಜಸ್ವಿ ಯಾದವ್, ಚುನಾವಣಾ ಆಯೋಗ ಪರವಾಗಿತ್ತು. ಆದ್ದರಿಂದ ನಾವು ಸೋತೆವು ಎಂದು ಹೇಳಿದ್ದಾರೆ. ‘ಇದು ಮೊದಲ ಬಾರಿಯೇನಲ್ಲ. 2015ರಲ್ಲೂ ಬಿಜೆಪಿ ಅಧಿಕಾರ ಪಡೆಯಲು ಹಿಂಬಾಗಿಲ ಮೂಲಕ ಪ್ರಯತ್ನಿಸಿತ್ತು. … Read more

ಅಂಗಾಂಗ ಮುರಿಯುತ್ತೇವೆ, ಸ್ಮಶಾನಕ್ಕೆ ಕಳುಹಿಸುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷನ ಮೇಲೆ ಹಲ್ಲೆ

Bengal BJP Chief

ಕೋಲ್ಕತ(12-11-2020):  ಅಂಗಾಗ ಮುರಿಯುತ್ತೇವೆ, ಕೊಲೆಯು ನಡೆಯಬಹುದು, ಸ್ಮಶಾನಕ್ಕೆ ಕಳುಹಿಸುತ್ತೇವೆ ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೆದರಿಕೆ ಹಾಕಿದ್ದ ಬಿಜೆಪಿ ಪಶ್ಚಿಮ ಬಂಗಾಳದ ಘಟಕದ ಅಧ್ಯಕ್ಷ ದಿಲೀಪ್​ ಘೋಷ್​ ಮತ್ತು ಕೆಲ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ವರದಿಯಾಗಿದೆ. ದಿಲೀಪ್ ಘೋಷ್ ಮೇಲೆ ಮತ್ತು ಅಲಿಪುರ್ದಾರ್​ ಜಿಲ್ಲೆಯಲ್ಲಿ ಕಾಲ್ಚಿನಿ ಕ್ಷೇತ್ರದ ಶಾಸಕ ವಿಲ್ಸನ್​ ಚಂಪಪುರಿ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೂ ದಾಳಿ ನಡೆಸಲಾಗಿದೆ. ಇದರಿಂದಾಗಿ ವಾಹನಕ್ಕೆ ಹಾನಿಯಾಗಿದೆ ಎಂದು ಹೇಳಲಾಗಿದೆ. ದಿಲೀಪ್ ಘೋಷ್ ಹೇಳಿಕೆ ಸಾಮಾನ್ಯವಾಗಿ ರಾಜ್ಯದಲ್ಲಿ ಕಾನೂನು … Read more

ಆತ್ಮನಿರ್ಭರ್ ಭಾರತ್ 3.0: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಟಿ, ಮಹತ್ವದ ಅಂಶಗಳು ಉಲ್ಲೇಖ

nirmala sitharaman

ನವದೆಹಲಿ (12-11-2020): ಆತ್ಮನಿರ್ಭರ್ 3.0 ಉತ್ತೇಜಕ ಕ್ರಮಗಳ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ನ್ಯಾಶನಲ್ ಮೀಡಿಯಾ ಸೆಂಟರ್ ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಪಿಎಂ ಆವಾಸ್ ಯೋಜನೆಯಡಿ ನಗರ ಪ್ರದೇಶಗಳ ಜನರಿಗೆ ನೀಡಲು 18 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಹೊಸ ಉದ್ಯೋಗಗಳಿಗೆ ಎರಡು ವರ್ಷಗಳವರೆಗೆ ನಿವೃತ್ತಿ ನಿಧಿಯಡಿ ಕೊಡುಗೆ ನೀಡಲು ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ … Read more

ಸ್ಥಳೀಯ ಸಂಸ್ಥೆಗಳ ಚುನಾವಣೆ: ಮನೆ-ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ವೇಳೆ ದುರ್ಘಟನೆ: ಮೈಮೇಲೆ ಮರಬಿದ್ದು ಕಾಂಗ್ರೆಸ್ ಅಭ್ಯರ್ಥಿ ದುರ್ಮರಣ

congress candidate

ತಿರುವನಂತಪುರಂ (12-11-2020): ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮರ ಬಿದ್ದು ಸಾವನ್ನಪ್ಪಿದ್ದಾರೆ. 42 ವರ್ಷದ ಆರ್ ಗಿರಿಜಾ ಕುಮಾರಿ ಅವರು ಪರಸ್ಸಲಾದ ಉಚಕ್ಕಾ ಮೂಲದವರಾಗಿದ್ದು, ಕರೋಡೆ ಪಂಚಾಯತ್‌ನ ಪುತಿಯ ಉಚಕ್ಕಡ ವಾರ್ಡ್‌ನಿಂದ ಕಾಂಗ್ರೆಸ್ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದರು. ಗಿರಿಜಾ ಕುಮಾರಿ ಅವರು ಆರು ವರ್ಷಗಳ ಕಾಲ ಕರೋಡೆ ಪಂಚಾಯತ್‌ನಲ್ಲಿರುವ ಕುಡುಂಬಶ್ರೀ ಸಮುದಾಯ ಅಭಿವೃದ್ಧಿ ಸೊಸೈಟಿಯಲ್ಲಿದ್ದರು. ತನ್ನ ಟಿಕೆಟ್ ನ್ನು ಪಕ್ಷವು ದೃಢಪಡಿಸಿದಾಗ ಅವರು ಎರಡು ದಿನಗಳ … Read more

ಆರ್.ಆರ್ ನಗರ ಗೆಲುವಿನ ಸಂತಸದಲ್ಲಿದ್ದ ಶಾಸಕ ಮುನಿರತ್ನಗೆ ಎದುರಾಗಿದೆ ಬಿಗ್ ಶಾಕ್!

mla munirathna

ಬೆಂಗಳೂರು(12-11-2020): ಆರ್.ಆರ್ ನಗರದಲ್ಲಿ ಭಾರೀ ಅಂತರದಿಂದ ಮುನಿರತ್ನ ಗೆದ್ದ ಬೆನ್ನಲ್ಲೇ ಅವರಿಗೆ ಶಾಕಿಂಗ್ ಎದುರಾಗಿದೆ. ಅಕ್ರಮ ವೋಟರ್ ಐಡಿ ತಯಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ. ಎಸ್‌. ಓಕಾ ನೇತೃತ್ವದ ಪೀಠ ಅಕ್ರಮ ವೋಟರ್ ಐಡಿ ಪತ್ತೆ ಪ್ರಕರಣದ ಬಗ್ಗೆ ಉನ್ನತ ದರ್ಜೆಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಅರ್ಜಿದಾರರ ಸಮಸ್ಯೆ ಆಲಿಸಬೇಕು. ತನಿಖೆ ಸೂಕ್ತವಾಗಿ ನಡೆದಿದೆಯೋ ಇಲ್ಲವೋ ಪರಿಶೀಲಿಸಬೇಕು. ಈ … Read more