ರಾಜಕಾರಣಿ, ಸಿನಿಮಾ ತಾರೆಯರು ಕೋರೋನಾ ನಿಯಮ ಉಲ್ಲಂಘಿಸಿದರೂ ಯಾಕೆ ಕ್ರಮಕೈಗೊಳ್ಳುತ್ತಿಲ್ಲ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

  ಬೆಂಗಳೂರು(05/11/2020): ರಾಜಕಾರಣಿಗಳು, ಸಿನಿಮಾ ತಾರೆಯರು ಕೊರೋನ ನಿಯಮಾವಳಿ ಉಲ್ಲಂಘಿಸಿದರೂ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿರದಿರುವುದನ್ನು ಮತ್ತು ಗಂಭೀರ ಸೆಕ್ಷನ್‍ಗಳಡಿ ಏಕೆ ಬಂಧಿಸಿಲ್ಲ ಎಂದು ಸಾರ್ವಜನಿಕ‌ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಾಡುತ್ತಾ ಹೈಕೋರ್ಟ್ ಪ್ರಶ್ನಿಸಿದೆ. ಜನಸಾಮಾನ್ಯರಿಗೆ ನೀವು 250 ರೂಪಾಯಿ ದಂಡ ವಿಧಿಸುತ್ತೀರಿಯಲ್ಲವೇ.‌ ಹಾಗಾದರೆ, ರಾಜಕಾರಣಿಗಳ, ಸಿನಿ ತಾರೆಯರ ವಿರುದ್ಧ ಎಫ್‍ಐಆರ್ ಏಕೆ ದಾಖಲಿಸಲ್ಲ. ಯಾವುದೇ ಕ್ರಮವಿಲ್ಲ ಏಕೆ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ … Read more

ರಜೆಯಲ್ಲಿ ಊರಿಗೆ ಬಂದಿದ್ದ ಬಿಎಸ್ ಎಫ್ ಯೋಧ ನಾಪತ್ತೆ; ದೂರು ದಾಖಲು

  ಬ್ರಹ್ಮಾವರ(05/11/2020): ರಜೆಯಲ್ಲಿ ಊರಿಗೆ ಬಂದಿದ್ದ ಬಿಎಸ್‌ಎಫ್ ಯೋಧರೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಯೋಧರ ಪತ್ನಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಪತ್ತೆಯಾಗಿರುವ ಯೋಧರು ಮುಂಡ್ಕಿನಜೆಡ್ಡು ಭೈರವ ನಿಲಯದ ವಸಂತ ಕೆ.ನಾಯ್ಕ್ (48)ಆಗಿದ್ದು, ಸದ್ಯ ಶ್ರೀನಗರದಲ್ಲಿ ಬಿಎಸ್‌ಎಫ್‌ನ ಗಡಿ ರಕ್ಷಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ. ರಜೆಯಲ್ಲಿ ಊರಿಗೆ ಬಂದಿದ್ದ ವಸಂತ ಅವರು ನ.3ರಂದು ಬೆಳಗ್ಗೆ 11:15ಕ್ಕೆ ಅವರ ಮೊಬೈಲ್ ಫೋನನ್ನು ಮನೆಯಲ್ಲಿ ಬಿಟ್ಟು ನಡೆದುಕೊಂಡು ಮುಂಡ್ಕಿನಜೆಡ್ಡು ಬಸ್ ‌ನಿಲ್ದಾಣದತ್ತ ತೆರಳಿದ್ದರು. ಅವರು ಅಪರಾಹ್ನ 1:30ರಿಂದ 2 … Read more

ಮಸೀದಿಗಳ ಧ್ವನಿವರ್ಧಕ ನಿಷೇಧ; ಡಿಜಿಪಿ ಪತ್ರ ವೈರಲ್

  ಬೆಂಗಳೂರು(05/11/2020): ಮಸೀದಿಗಳಲ್ಲಿನ ಧ್ವನಿವರ್ಧಕ ತೆರವುಗೊಳಿಸುವಂತೆ ಆದೇಶಿಸಿರುವ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಪತ್ರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ವಕೀಲರಾದ ಹರ್ಷ ಮುತಾಲಿಕ್ ಎಂಬವರು ರಾಜ್ಯದೆಲ್ಲೆಡೆ ಇರುವ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ಧಕಗಳ ನಿಷೇಧಿಸಿ ತೆರವುಗೊಳಿಸುವಂತೆ ಒತ್ತಾಯಿಸಿ ಡಿಜಿಪಿಗೆ ಪತ್ರ ಬರೆದಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿರುವ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, ಮಸೀದಿಗಳಲ್ಲಿ ಧ್ವನಿವರ್ಧಕ … Read more

ಕರ್ನಾಟಕ ರಾಜ್ಯ ಫೈಝೀಸ್ ಒಕ್ಕೂಟದಿಂದ ಬ್ರಹತ್ ಕ್ಯಾಂಪೇನ್ ಭಾಗವಾಗಿ ಹೊಸಂಗಡಿಯಲ್ಲಿ ಸಂದೇಶ ಕಾರ್ಯಕ್ರಮ

ಮಂಗಳೂರು(05/11/2020): ಪ್ರವಾದಿ ಚರ್ಯೆ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಎಂಬ ದ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಫೈಝೀಸ್ ಒಕ್ಕೂಟವು ಹಮ್ಮಿಕೊಂಡಿರುವ ಬ್ರಹತ್ ಕ್ಯಾಂಪೇನ್ ನಡೆಯುತ್ತಿದ್ದು, ಇದರ ಭಾಗವಾಗಿ ಮೂಡಬಿದಿರೆಯ ಹೊಸಂಗಡಿಯಲ್ಲಿ ಸಂದೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಅಸ್ಸೆಯ್ಯದ್ ಅಕ್ರಮ್ ಅಲಿ ತಂಙಲ್  ವಹಿಸಿದ್ದರು. ಕಾರ್ಯಕ್ರಮಲ್ಲಿ ಮುಖ್ಯ ಭಾಷಣ  ಮಾಡಿದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ  ಸದ್ಯದ ಪರಿಸ್ಥಿತಿಯಲ್ಲಿ ಅಕ್ರಮ ಮತ್ತು ಅಮಲು ಮಿತಿಮೀರುತ್ತಿದ್ದು ಇದರ ವಿರುದ್ಧ ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿ ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ.ಆ ನಿಟ್ಟಿನಲ್ಲಿ … Read more

ಬಾಲಿವುಡ್ ನಟಿ ಪೂನಂ ಪಾಂಡೆ ಬಂಧನ

  ಹೊಸದೆಹಲಿ(05/11/2020): ಗೋವಾದ ಚಪೋಲಿ ಅಣೆಕಟ್ಟು ಪ್ರದೇಶಕ್ಕೆ ಯಾವುದೇ ಅನುಮತಿ ಇಲ್ಲದೇ ಪ್ರವೇಶಿಸಿ, ಅಶ್ಲೀಲ ವಿಡಿಯೊ ಚಿತ್ರೀಕರಿಸಿದ ಆರೋಪದಡಿ ನಟಿ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಪೂನಂ ಪಾಂಡೆಗೆ ಚಿತ್ರೀಕರಣ ಮಾಡಲು ಅವಕಾಶ ನೀಡಿ, ಅಧಿಕಾರವನ್ನು ದುರ್ಬಳಕೆ ಮಾಡಿದ ಆರೋಪದಡಿ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನೂ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ದಕ್ಷಿಣ ಗೋವಾದ ಕನಕೋನ ಪಟ್ಟಣದ ಜನರು ನೀಡಿದ ದೂರು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.  

ಸುಳ್ಯ ನಗರ ಪಂಚಾಯತ್ ಚುನಾವಣೆ: ಅಧ್ಯಕ್ಷರಾಗಿ ವಿನಯ ಕುಮಾರ್ ಅವಿರೋಧ ಆಯ್ಕೆ

ಸುಳ್ಯ(05/11/2020): ಇಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವಿನಯ್ ಕುಮಾರ್ ಕಂದಡ್ಕ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಿನಿ ಪೆಲತ್ತಡ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ವಾಗಿ ಆಯ್ಕೆಗೊಂಡಿದ್ದಾರೆ.   ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅನಂತ ಶಂಕರ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್ ಅಂಗಾರ, ಉಪತಹಶೀಲ್ದಾರ್ ಚಂದ್ರಕಾಂತ್ ಕಂದಾಯ ನಿರೀಕ್ಷಕರು ಕೊರಗಪ್ಪ ಹೆಗಡೆ ಹಾಗೂ ನಗರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಒಂದು ವರ್ಷ ವಿದ್ಯುತ್ ದರ ಏರಿಕೆ ಮಾಡದಂತೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಗ್ರಹ

  ಬೆಂಗಳೂರು(05/11/2020): ರಾಜ್ಯ ಸರಕಾರವು ವಿದ್ಯುತ್ ದರವನ್ನು ಏರಿಕೆ ಮಾಡಿರುವುದನ್ನು ಮಾಡಿರುವ ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಂಡಿಸಿದ್ದಾರೆ. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು ಕೊರೋನಾ ಸೋಂಕು ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಯ ಮೇಲೆ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು ಎಂದು ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ. ಕೊರೋನಾ ಸೋಂಕು ತಗುಲಿದ ನಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ವಲಯಗಳು ನಷ್ಟದ ಸುಳಿಗೆ … Read more

ಕತರಿನಲ್ಲಿ ಇಲೆಕ್ಟ್ರಾನಿಕ್ ಚೆಕ್ಕುಗಳು ಚಾಲ್ತಿಗೆ ?

ದೋಹಾ-ಕತರ್(4-11-2020): ಕತರಿನಲ್ಲಿ ಚೆಕ್ ಬೌನ್ಸ್ ಆಗುವ ಪ್ರಕರಣಗಳಿಗೆ ನಿಯಂತ್ರಣ ತರುವ ಸಲುವಾಗಿ ಇನ್ನು ಮುಂದೆ ಇಲೆಕ್ಟ್ರಾನಿಕ್ ಚೆಕ್ಕುಗಳು ಚಾಲ್ತಿಗೆ ಬರಲಿದೆಯೆನ್ನಲಾಗಿದೆ. ಕಾಗದದ ಚೆಕ್ಕುಗಳ ಬದಲು ಇಲೆಕ್ಟ್ರಾನಿಕ್ ಚೆಕ್ ವ್ಯವಹಾರವು ಜಾರಿಯಾದರೆ, ಚೆಕ್ಕು ಸಂಬಂಧಿತ ಅಪರಾಧ ಪ್ರಕರಣಗಳಿಗೆ ತಡೆಯಾಗುವುದಾಗಿ ಕತರ್ ಸೆಂಟ್ರಲ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪೂರ್ವ ವ್ಯವಹಾರಗಳನ್ನು ಪರಿಶೀಲಿಸಿದ ಬಳಿಕವೇ ಹೊಸ ಚೆಕ್ಕುಗಳನ್ನು ಪಡೆಯಲು ಅನುಮತಿ ನೀಡುವುದಾಗಿ ಸೆಂಟ್ರಲ್ ಬ್ಯಾಂಕ್ ಮೊನ್ನೆಯಷ್ಟೇ ಸುತ್ತೋಲೆ ಹೊರಡಿಸಿತ್ತು.

ಒಮನ್: ಅನುಮತಿ ಪಡೆಯದೇ ಒಟ್ಟುಗೂಡಿದ ಗುಂಪು ಪೋಲೀಸ್ ವಶಕ್ಕೆ

ಮಸ್ಕತ್(4-11-2020): ಅನಧಿಕೃತವಾಗಿ ಒಟ್ಟು ಗೂಡಿದ ಗುಂಪನ್ನು ಪೋಲೀಸರು ತಮ್ಮ ವಶಕ್ಕೆ ತೆಗೆದುಕೊಂಡದ್ದಾರೆ. ಗುಂಪಿನಲ್ಲಿ ಒಬ್ಬ ಒಮನ್ ಪ್ರಜೆಯೂ, ಹಲವಾರು ವಿದೇಶಿಯರೂ ಇದ್ದರು. ಕೊರೋನಾ ಮುಂಜಾಗ್ರತಾ ಕ್ರಮಗಳ ಭಾಗವಾಗಿ ಒಮನ್ ಸುಪ್ರೀಂ ಕಮಿಟಿ ಜನರಿಗೆ ಹಲವು ಮಾರ್ಗಸೂಚಿಗಳನ್ನು ನಿರ್ದೇಶಿಸಿದೆ. ಇವುಗಳನ್ನು ಉಲ್ಲಂಘಿಸಿದ ಈ ಗುಂಪನ್ನು ದೊಫಾರ್ ಗವರ್ನರೇಟ್ ಪೋಲೀಸ್ ಕಮಾಂಡ್‌ ಬಂಧಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ರೋಯಲ್ ಒಮನ್ ಪೋಲೀಸ್ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ಆರ್ಥಿಕ ಅಡಚಣೆ: ಪೈಲಟುಗಳಿಗೆ ಒಂದು ವರ್ಷ ಸಂಬಳ ರಹಿತ ರಜೆ ಪಡೆಯುವ ಅವಕಾಶ ನೀಡಿದ ಎಮಿರೇಟ್ಸ್ ಸಂಸ್ಥೆ

ಅಬುಧಾಬಿ(5-11-2020): ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿ ತನ್ನ ಪೈಲಟುಗಳಿಗೆ ವೇತನ ರಹಿತ ರಜೆಯ ಅವಕಾಶ ನೀಡುವುದಾಗಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ತಿಳಿಸಿದೆ. ಇತ್ತೀಚಿಗೆ ಸಂಸ್ಥೆಯು ತುಸು ಚೇತರಿಸಿಕೊಳ್ಳುವ ಲಕ್ಷಣಗಳು ಕಂಡು ಬಂದಿರುವುದರಿಂದ ಒಂದು ವರ್ಷ ರಜೆಯ ನಡುವೆ ಯಾವಾಗ ಬೇಕಾದರೂ ಮರಳಿ ಕರ್ತವ್ಯಕ್ಕೆ ಹಾಜರಾಗುವ ಕರೆ ಬರಬಹುದು. ಆ ಸಂದರ್ಭದಲ್ಲಿ ಉದ್ಯೋಗಿಗಳು ಮರಳಿ ಬರಬೇಕೆಂಬ ಷರತ್ತೂ ಇದರಲ್ಲಿದೆ. ರಜೆಯ ಅವಧಿಯಲ್ಲಿ ವೇತನದ ಹೊರತಾದ ವಸತಿ, ವೈದ್ಯಕೀಯ ಇತ್ಯಾದಿ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಕೊರೋನಾ ತಂದ ಆರ್ಥಿಕ … Read more