ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ನಿಧನ

gujarath

ಅಹಮದಾಬಾದ್(29/10/2020): ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಕೇಶುಭಾಯ್ ಪಟೇಲ್ ನಿಧನರಾಗಿದ್ದಾರೆ. ತಮ್ಮ 92 ನೇ ವಯಸ್ಸಿನಲ್ಲಿ ಕೇಶುಭಾಯ್‌ ಅಸುನೀಗಿದ್ದಾರೆ. ಗುಜರಾತ್‌ನಲ್ಲಿ ಎರಡು ಅವಧಿಗೆ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಗುರುವಾರ ಮುಂಜಾನೆ ಉಸಿರಾಟದ ತೊಂದರೆ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕೇಶುಭಾಯ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಲಕ್ಷಣ ರಹಿತ ಕೊರೊನಾ ಬಂದಿತ್ತು. ನಂತರ ಚಿಕಿತ್ಸೆ ನೀಡಿ ಗುಣಮುಖರಾಗಿದ್ದರು. ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್‌ನಲ್ಲಿ ಹಲವು ಜನಪರ ಕಾರ್ಯಗಳನ್ನು … Read more

ರಾಜ್ಯದಲ್ಲಿ ಇಂದು 4,025 ಮಂದಿಗೆ ಪಾಸಿಟಿವ್ ದೃಢ

corona

ಬೆಂಗಳೂರು(29/10/2020): ರಾಜ್ಯದಲ್ಲಿ ಇಂದು 4,025 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ 45 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11,091ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು 7,661 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 7,41,219ಕ್ಕೆ ಏರಿಕೆಯಾಗಿದೆ. 64,480 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು

ಚನ್ನಗಿರಿ(29/10/2020); ಸಂತೇಬೆನ್ನೂರು ಸಮೀಪ ಸೋಮನಾಳ್ ಗ್ರಾಮದ ಬಳಿ ಇರುವ ಭದ್ರ ಕಿರು ನಾಲೆಯಲ್ಲಿ ಈಜು ಬಾರದೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ . ಮೃತರು ಚನ್ನಗಿರಿ ಪಟ್ಟಣದ ವಾಸಿಗಳಾಗಿದ್ದು ರಂಗಸ್ವಾಮಿ (30)  ಹಾಗೂ ಚಿನ್ಮಯ್ (21)  ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಸಂತೇಬೆನ್ನೂರು ಪೋಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಎಸ್ ಮೇಟಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂತೇಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

ಬೇಷರತ್ ಕ್ಷಮಾಪಣೆ ಕೋರಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ | ಪ್ರಕರಣ ಅಂತ್ಯಗೊಳಿಸಿದ ದೆಹಲಿ ಹೈಕೋರ್ಟ್

ದೆಹಲಿ(29-10-2020): ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಕೈ ಬಿಟ್ಟಿದೆ. ತಾನು ಬೇಷರತ್ ಕ್ಷಮೆ ಯಾಚನೆ ಮಾಡುವೆನೆಂದು ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದೆ. 2017 ರಲ್ಲಿ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಅದ್ಮಿ ಪಕ್ಷದ ನಾಯಕನೂ, ಆರೋಗ್ಯ ಸಚಿವರೂ ಆದ ಸತ್ಯೇಂದ್ರ ಜೈನ್ ವಿರುದ್ಧ ಕಪಿಲ್ ಮಿಶ್ರಾ ಲಂಚದ ಆರೋಪ ಹೊರಿಸಿದ್ದರು. ಈ ವಿಚಾರವಾಗಿ ಕಪಿಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಕೇಜ್ರಿವಾಲಿಗೆ ಸತ್ಯೇಂದ್ರ  … Read more

ಫರಂಗಿಪೇಟೆ; ಹಲ್ಲೆಗೊಳಗಾಗಿದ್ದ ಬಿಜೆಪಿ ಮುಖಂಡನನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮುಸ್ಲಿಮ್ ರಿಕ್ಷಾ ಚಾಲಕ

ಬಂಟ್ವಾಳ(29/10/2020); ನಿನ್ನೆ ಫರಂಗಿಪೇಟೆಯಲ್ಲಿ ಪೋಟೋಗ್ರಾಫರ್ ಹಾಗೂ ಬಿಜೆಪಿ ಮುಖಂಡ ದಿನೇಶ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ಹಲ್ಲೆಗೈದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದ ಅಬ್ದುಲ್ ರಶೀದ್ ಪಾವೂರ್ ಅವರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ ರಾತ್ರಿ 8ಗಂಟೆಗೆ ದಿನೇಶ್ ಶೆಟ್ಟಿಯವರನ್ನು ಅವರ ಸ್ಟುಡಿಯೋದಲ್ಲಿ ದುಷ್ಕರ್ಮಿಗಳು ಕೊಲೆಯತ್ನ ನಡೆಸಿ ಪರಾರಿಯಾಗಿದ್ದರು. ಈ ವೇಳೆ ಲಕ್ಷ್ಮಣ ಎಂಬವರ ಮೂಲಕ ಸುದ್ದಿ ತಿಳಿದ ರಶೀದ್ ಕೂಡಲೇ ಸ್ಟುಡಿಯೋಗೆ ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ದಿನೇಶ್ ಶೆಟ್ಟಿಯವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ರಿಕ್ಷಾ … Read more

ಇನ್ನೂ ಮದುವೆಯಾಗಿಲ್ಲ ಕಾಂಗ್ರೆಸ್ ಮಗುವಿಗೆ ನಾಮಕರಣ ಮಾಡುವ ಅವಸರದಲ್ಲಿದೆ; ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಚಿಕ್ಕಮಗಳೂರು(29/10/2020): ಇನ್ನೂ ಹುಡುಗಿ ಹುಡುಕಿಲ್ಲ, ನಿಶ್ಚಿತಾರ್ಥವೂ ಆಗಿಲ್ಲ. ಆದರೆ, ಕಾಂಗ್ರೆಸ್ ಮಗು ನಾಮಕರಣದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು. ಇಂದು ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಯಡಿಯೂರಪ್ಪ  ನೇತೃತ್ವದ ರಾಜ್ಯ ಸರ್ಕಾರದ ಅವಧಿ ಮುಗಿಯಲು ಇನ್ನು ಮೂರೂವರೆ ವರ್ಷ ಇದೆ. ಆದಾರೆ, ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ಗಲಾಟೆ ಆರಂಭವಾಗಿದೆ. ಈಗಲೇ ಹೀಗೆ ಆಡಿದರೆ ಇನ್ನು ಅಧಿಕಾರ ಕಾಲ ಸನ್ನಿಹಿತವಾದರೆ ಹೇಗೆ ಆಡಬಹುದು’ ಎಂದು ಕಿಚಾಯಿಸಿದರು. … Read more

ಮಾದಕ ಜಾಲ ಪ್ರಕರಣ; ಕೇರಳದ ಮಾಜಿ ಗೃಹ ಸಚಿವರ ಪುತ್ರ ಅರೆಸ್ಟ್

binish kodiyeri

ಬೆಂಗಳೂರು(29/10/2020): ಸ್ಯಾಂಡಲ್ ವುಡ್ ಮಾದಕ ಜಾಲದ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಸಂಬಂಧ ಇದೀಗ  ಕೇರಳದ ಮಾಜಿ ಗೃಹ ಸಚಿವ ಹಾಗೂ ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ  ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ಬೆಂಗಳೂರು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ದಾಖಲಾದ ಮಾದಕ ಜಾಲ ಪ್ರಕರಣದ ಪ್ರಮುಖ ಆರೋಪಿ ಅನೂಪ್ ನೊಂದಿಗೆ ಬೀನೇಶ್ ನಂಟು ಹೊಂದಿದ್ದು, ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ವೊಂದು ತೆರೆಯಲು ಬಿನೀಶ್ ಡ್ರಗ್ಸ್ ಪೆಡ್ಲರ್ ಅನೂಪ್​ಗೆ … Read more

ಕೋವಿಡ್ ನೆರವು; ಪ್ರಧಾನಿ ಮೋದಿ ಮಾತಿಗೂ ಆರ್ ಟಿ ಐ ಮೂಲಕ ಕೇಂದ್ರ ಸರಕಾರ ನೀಡಿದ ಉತ್ತರಕ್ಕೂ ಅಜಗಜಾಂತರ!

modi

ಹೊಸದೆಹಲಿ(29/10/2020): ವಿಶ್ವವೇ ಕೋವಿಡ್ 19ಗೆ ತುತ್ತಾಗಿದ್ದ ಸಂದರ್ಭದಲ್ಲಿ ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಮತ್ತು ಇತರ ನೆರವು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜುಲೈ ತಿಂಗಳಿನಲ್ಲಿ ವಿಶ್ವಸಂಸ್ಥೆಯಲ್ಲಿ ತಿಳಿಸಿದ್ದರು.  ಇದು ಸುಳ್ಳು ಮಾಹಿತಿ ಆಗಿತ್ತೇ? ಎಂಬ ಸಂಶಯವನ್ನು ಪ್ರಮುಖ ಆಂಗ್ಲ ಪತ್ರಿಕೆಯೊಂದು ವರದಿಯಲ್ಲಿ ಪ್ರಕಟಿಸಿದೆ. ಇದಕ್ಕೆ ಕಾರಣ,  ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಕೇಂದ್ರ ಸರ್ಕಾರ ನೀಡಿದ ಉತ್ತರ. ವಿಶ್ವಸಂಸ್ಥೆ ವೇದಿಕೆಯಲ್ಲಿ ಪ್ರಧಾನಿ ಮೋದಿ ನೀಡಿದ ಉತ್ತರಕ್ಕೂ … Read more

ಗ್ರಾಮ ಪಂಚಾಯತ್ ಚುನಾವಣೆ| 194 ಚಿಹ್ನೆಗಳು ಮುಕ್ತ: ಯಾವ್ಯಾವ ಚಿಹ್ನೆಗಳು ಲಭ್ಯವಿದೆ ಓದಿ

election

ಮಂಗಳೂರು(29-10-2020): ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ 194 ಮುಕ್ತ ಚಿಹ್ನೆಗಳನ್ನು ಆಯ್ಕೆ ಮಾಡಿದೆ. ಮೇಲ್ನೋಟಕ್ಕೆ 197 ಚಿಹ್ನೆಗಳನ್ನು ಆಯ್ದುಕೊಂಡಿದ್ದರೂ ಇದರಲ್ಲಿ ಮೂರನ್ನು ಕೈಬಿಡಲಾಗಿದೆ. ಚಿಹ್ನೆಗಳು ಈ ಕೆಳಗಿನಂತಿದೆ ಹವಾನಿಯಂತ್ರಕ, ಅಲಮೇರ, ಆಟೋರಿಕ್ಷಾ, ಬೇಬಿ ವಾಕರ್‌, ಬಲೂನ್‌, ಬಳೆ, ಹಣ್ಣು ಇರುವ ಬಾಸ್ಕೆಟ್‌, ಬ್ಯಾಟ್‌, ಬಾಟ್ಸಮನ್‌, ಬ್ಯಾಟರಿ ಟಾರ್ಚ್‌, ಮುತ್ತಿನ ಹಾರ, ಬೆಲ್ಟ್, ಬೆಂಚ್‌, ಬೈಸಿಕಲ್‌ ಪಂಪು, ದುರ್ಬೀನು, ಬಿಸ್ಕತ್ತು, ಕಪ್ಪು ಹಲಗೆ, ಹಾಯಿ ದೋಣಿ ಮತ್ತು ನಾವಿಕ, ಪೆಟ್ಟಿಗೆ, ಬ್ರೆಡ್‌, ಬ್ರಿಕ್ಸ್‌, ಸೂಟ್‌ಕೇಸ್‌, ಬ್ರಶ್‌, … Read more

Delhi Police lodged FIR against 4 AAP MLA’s

AAP

NEW DELHI(29-10-2020): The Delhi Police has lodged an FIR against the MLAs of the AAP as they protested against the proposal to privatize the sanitation work in South Delhi at the Standing Board of the South Delhi Metropolitan Council (SDMC). An FIR has been filed against Aam Aadmi Party legislators Kuldeep Monu (Kondli), Rakhi Bidlan … Read more