ಕತರಿಗೆ ಹಿಂದಿರುಗಿ ಬರುವವರ ವಿಚಾರ | ಈಗ ಇರುವ ಕೊರೋನಾ ನಿಯಮಾವಳಿಗಳನ್ನೇ ಮುಂದುವರಿಸಲು ತೀರ್ಮಾನ

ದೋಹಾ(23-10-2020): ಕತರಿಗೆ ಹಿಂದಿರುಗಿ ಬರುವವರ ವಿಚಾರದಲ್ಲಿ ಈಗ ಇರುವ ಕೊರೋನಾ ನಿಯಮಾವಳಿಗಳನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ. ಕತರಿಗೆ ಹಿಂದಿರುಗುವ ಮೊದಲು ‘ಕತರ್ ಪೋರ್ಟಲ್’ ಮೂಲಕ “ಎಕ್ಸೆಪ್ಶನಲ್ ರಿ ಎಂಟ್ರಿ ಪರ್ಮಿಟ್” ಪಡೆದಿರಬೇಕೆಂಬ ನಿಯಮದಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದು ಸಾರ್ವಜನಿಕ ಆರೋಗ್ಯ ಇಲಾಖೆಯು ತಿಳಿಸಿದೆ. ಕತರಿ ಪೌರರಿಗೆ ಮತ್ತು ಕತರಿನ ರೆಸಿಡೆನ್ಸಿ ವೀಸಾ ಹೊಂದಿರುವವರಿಗೆ ದೇಶದೊಳಗೆ ಬರುವ ಮತ್ತು ಹೋಗುವ ವಿಚಾರಗಳಲ್ಲಿ ಕೆಲವು ಸಣ್ಣಪುಟ್ಟ ವ್ಯತ್ಯಾಸಗಳನ್ನಷ್ಟೇ ಮಾಡಲಾಗಿದೆ. ಇದರ ಪ್ರಕಾರ, ಹೆತ್ತವರು ಜೊತೆಗಿರದೇ ಒಬ್ಬಂಟಿಯಾಗಿ ಪ್ರಯಾಣ ಬೆಳೆಸುವ ಹದಿನೆಂಟು ವರ್ಷಕ್ಕಿಂತ ಕಡಿಮೆ … Read more

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೋವಿಡ್‌–19; 5,356 ಹೊಸ ಪ್ರಕರಣ

  ಬೆಂಗಳೂರು(23/10/2020): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 5,356 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 51 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ‌ ನೀಡಿದೆ. ಇದೇ ಅವಧಿಯಲ್ಲಿ 8,749 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ 89,483 ಸಕ್ರಿಯ ಪ್ರಕರಣಗಳಿವೆ. ಒಟ್ಟು 7,93,907 ಪ್ರಕರಣಗಳು ದಾಖಲಾಗಿದ್ದು, ಈವರೆಗೂ 6,93,584 ಮಂದಿ ಗುಣಮುಖರಾಗಿದ್ದಾರೆ ಹಾಗೂ 10,821 ಮಂದಿ ಮೃತಪಟ್ಟಿದ್ದಾರೆ. ಐಸಿಯುನಲ್ಲಿ 936 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. … Read more

ಪ್ರಚೋದನಾಕಾರಿ ಪೋಸ್ಟ್ ಹಾಕಿ ಗಲಭೆಗೆ ಕಾರಣನಾಗಿದ್ದ ನವೀನ್ ನಿಂದ ಕ್ಷಮೆಯಾಚನೆ

  ಬೆಂಗಳೂರು(23/10/2020): ಪ್ರಚೋದನಕಾರಿ ಪೋಸ್ಟ್ ಹಾಕಿ ನಾನು ತಪ್ಪು ಮಾಡಿದ್ದೇನೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇ‌ನೆ ಎಂದು ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಕಾರಣವಾಗಿದ್ದ ಪ್ರಚೋದನಕಾರಿ ಪೋಸ್ಟ್ ಹಾಕಿ ಜೈಲು ಸೇರಿದ್ದ ನವೀನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೆ ಪೋಸ್ಟ್ ಮಾಡಿದ್ದು ತಪ್ಪು. ನಾನದನ್ನು ಒಪ್ಪಿಕೊಳ್ಳುತ್ತೇನೆ. ನನ್ನಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆದ್ದರಿಂದ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಕನಿಷ್ಠ ಐದು ಸಾವು

  ಮಧುರೈ(23/10/2020): ತಮಿಳುನಾಡಿನ ಮಧುರೈಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ರಾಸಾಯನಿಕಗಳ ಬೆರಕೆಯಲ್ಲಿ ಆದ ಎಡವಟ್ಟಿನಿಂದ ಬೆಂಕಿ ಹೊತ್ತಿಕೊಂಡು ಈ ಸ್ಫೋಟ‌ ನಡೆದಿದೆ ಎಂದು‌ ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ; ಪ್ರವಾಹ ಭೀತಿ

  ಬೆಂಗಳೂರು(23/10/2020): ಭಾರೀ ಮಳೆಗೆ ಬೆಂಗಳೂರು ನಗರದ ಬಹುತೇಕ ಪ್ರದೇಶಗಳು ಜಲಾವ್ರತಗೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ. ಇಂದು ಬೆಂಗಳೂರಿನ ಸುರಿದ ಭಾರೀ ಮಳೆಗೆ ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಆರ್.ಟಿ.ನಗರ, ಹೆಬ್ಬಾಳ, ಮಡಿವಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪ್ರಮುಖ ರಸ್ತೆಗಳಲ್ಲಿ ಧಾರಾಕಾರ ನೀರು ಹರಿಯುತ್ತಿರುವುದು ಭೀತಿಗೆ ಕಾರಣವಾಗಿದೆ.

ಬಂಟ್ವಾಳ: ದುಷ್ಕರ್ಮಿಗಳ ತಂಡದಿಂದ ರೌಡಿಶೀಟರ್ ಕೊಲೆ

ಬಂಟ್ವಾಳ(23/10/2020): ದುಷ್ಕರ್ಮಿಗಳ ತಂಡವೊಂದು ರೌಡಿಶೀಟರ್ ಒಬ್ಬನನ್ನು ಹತ್ಯೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಇಂದು ಸಂಜೆ ನಡೆದಿದೆ. ಹತ್ಯೆಯಾದ ಯುವಕನನ್ನು ಕಲ್ಲಡ್ಕ ನಿವಾಸಿ ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಈತ ರೌಡಿಶೀಟರ್ ಆಗಿದ್ದನೆಂದು ಹೇಳಲಾಗಿದೆ. ಈತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ದುಷ್ಕರ್ಮಿಗಳ ತಂಡವು ಹತ್ಯೆಗೈದಿದೆ.

ಎನ್ ಸಿಪಿಗೆ ಸೇರಿದ ಮಹಾರಾಷ್ಟ್ರದ ಬಿಜೆಪಿ ಮುಖಂಡ

  ಮುಂಬೈ(23/10/2020): ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಬಿಜೆಪಿಯ ಪ್ರಮುಖ ಮುಖಂಡ, ಮಾಜಿ ಸಚಿವ ಏಕನಾಥ್‌ ಖಡ್ಸೆ ಅವರು ಶರದ್‌ ಪವಾರ್‌ ಅವರ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷಕ್ಕೆ (ಎನ್‌ಸಿಪಿ) ಸೇರಿದರು. ಮಾಜಿ ಮುಖ್ಯಂತ್ರಿ ದೇವೇಂದ್ರ ಫಡ್ನವಿಸ್ ನನ್ನ ರಾಜಕೀಯ ಜೀವನವನ್ನು ಹಾಳು ಮಾಡಿದರು ಎಂದು ಆರೋಪಿಸಿ ಬುಧವಾರವಷ್ಟೇ ಅವರು ಬಿಜೆಪಿ ತೊರೆದಿದ್ದರು. ಇಂದು ಎನ್ ಸಿಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಆ ಪಕ್ಷವನ್ನು ಸೇರಿದರು. ಎನ್‌ಸಿಪಿ ಮುಖಂಡ ಜಯಂತ್‌ ಪಾಟೀಲ ಅವರು … Read more

ಮೋದಿ ಸುಳ್ಳು ಹೇಳಿ ನಮ್ಮ ಸೈನಿಕರನ್ನು‌ ಅವಮಾನಿಸುತ್ತಿದ್ದಾರೆ: ರಾಹುಲ್ ಗಾಂಧಿ ಟೀಕೆ

  ಪಾಟ್ನಾ(23/10/2020): ಚೀನಾದ ಸೈನಿಕರು ಭಾರತದೊಳಗೆ ನುಸುಳಿ ಬಂದಿದ್ದರೂ, ಪ್ರಧಾನಿ ಮೋದಿಯವರು ಸುಳ್ಳು ಹೇಳಿ ನಮ್ಮ ಸೈನಿಕರನ್ನು ಅವಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿ ಮಾತನಾಡಿದ ರಾಹುಲ್‌ ಗಾಂಧಿ,‘ ಚೀನಾದ ಸೈನಿಕರು ನಮ್ಮ ಗಡಿಯೊಳಗೆ ನುಸುಳಿ ಬಂದಿರುವುದು ಸಾಬೀತಾಗಿದೆ. ಆದರೂ, ಯಾರೊಬ್ಬರೂ ನಮ್ಮ ಗಡಿಯೊಳಗೆ ಬಂದಿಲ್ಲ ಎಂದು ಸುಳ್ಳು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಚೀನಾದ ಸೈನ್ಯವು ಭಾರತದ ಭೂಪ್ರದೇಶಕ್ಕೆ … Read more

ಅಮೆರಿಕಾದಲ್ಲಿ 11 ಭಾರತೀಯ ವಿದ್ಯಾರ್ಥಿಗಳ ಬಂಧನ

AMERICA

ಅಮೆರಿಕಾ(23-10-2020): ಫೆಡರಲ್ ಕಾನೂನು ಜಾರಿ ಸಂಸ್ಥೆಗಳು ಭಾರತದ 11 ಮಂದಿ ಸೇರಿದಂತೆ 15 ವಿದ್ಯಾರ್ಥಿಗಳನ್ನು ದೇಶದೊಳಗೆ ಮೋಸದಿಂದ ಉಳಿದುಕೊಂಡ ಆರೋಪದ ಮೇಲೆ ಬಂಧಿಸಿವೆ. ಈ ವಿದ್ಯಾರ್ಥಿಗಳನ್ನು ಬೋಸ್ಟನ್, ವಾಷಿಂಗ್ಟನ್, ಹೂಸ್ಟನ್ ನ ವಿವಿಧ ಸ್ಥಳಗಳಿಂದ ಬುಧವಾರ ಬಂಧಿಸಲಾಗಿದೆ. 11 ಭಾರತೀಯ ಪ್ರಜೆಗಳಲ್ಲದೆ, ಯುಎಸ್ ಇಮಿಗ್ರೇಷನ್ ಮತ್ತು ಕಸ್ಟಮ್ಸ್  ಅಧಿಕಾರಿಗಳು  ಇಬ್ಬರು ಲಿಬಿಯನ್ನರನ್ನು ಒಬ್ಬ ಸೆನೆಗಲೀಸ್ ಮತ್ತು ಒಬ್ಬ ಬಾಂಗ್ಲಾದೇಶಿ ರಾಷ್ಟ್ರೀಯರನ್ನು ಬಂಧಿಸಿದೆ. ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಅಧಿಕಾರಿಗಳ ಪ್ರಕಾರ, ಯುಎಸ್ನಲ್ಲಿ ಉಳಿಯಲು ಪ್ರಾಯೋಗಿಕ ತರಬೇತಿ … Read more

ಬಿಜೆಪಿ ಗೆದ್ದರೆ ಬಿಹಾರಕ್ಕೆ ಕೋವಿಡ್ ಲಸಿಕೆ ಉಚಿತ! ಬೇರೆ ರಾಜ್ಯದಲ್ಲಿರುವವರು ಕೇಂದ್ರ ಸರಕಾರಕ್ಕೆ ಲೆಕ್ಕಕ್ಕಿಲ್ಲವೇ?

bjp

ಬೆಂಗಳೂರು(23-10-2020): ಚುನಾವಣೆ ಇರುವ ರಾಜ್ಯಗಳಿಗೆ ಮಾತ್ರ ಬಿಜೆಪಿ ಕೋವಿಡ್ ಲಸಿಕೆ ಉಚಿತವಾಗಿ ಘೋಷಿಸಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.  ಕರ್ನಾಟಕದಲ್ಲಿ ಚುನಾವಣೆ ಇಲ್ಲ ಎಂಬ ಕಾರಣಕ್ಕಾಗಿ ನಮ್ಮ ಆರೋಗ್ಯ ಲೆಕ್ಕಕ್ಕಿಲ್ಲವೇ? ಕನ್ನಡಿಗರ ಆರೋಗ್ಯ ಲೆಕ್ಕಕ್ಕಿಲ್ಲವೆ? ಬಿಜೆಪಿ ರಾಜ್ಯಾಧ್ಯಕ್ಷರಿಗೆ ಧಮ್ ಇದ್ದರೆ, ಅವರದೇ ಪಕ್ಷ ಅಧಿಕಾರದಲ್ಲಿರುವ ಕೇಂದ್ರ ಸಚಿವರ ಮನವೊಲಿಸಿ ಕರ್ನಾಟಕಕ್ಕೂ ಉಚಿತವಾಗಿ ಲಸಿಕೆ ಕೊಡಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಟ್ವೀಟರ್  ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ … Read more