ಮೋದಿ ಸರಕಾರ ದೇಶದ ಆಡಳಿತವನ್ನು ಬಂಡವಾಳಶಾಹಿಯ ಕೈಗೊಪ್ಪಿಸಿದೆ; ಸೋನಿಯಾ ಗಾಂಧಿ ಆರೋಪ

soniya

ಹೊಸದೆಹಲಿ(19/10/2020): ‘ಈ ದೇಶದ ಆಡಳಿತ ಚುಕ್ಕಾಣಿಯನ್ನು ಜನರಿಂದ ಕಸಿದುಕೊಂಡು ಕೆಲವೇ ಕೆಲವು ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸಲು ಈಗಿನ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರದ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ದೆಹಲಿಯಲ್ಲಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಹಾಗೂ ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ‘ಪರಿಶಿಷ್ಟ ಜನರ ಮೇಲೆ ದೇಶಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೂ, ಮೋದಿ ಸರಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು … Read more

ತಮಿಳುನಾಡಿನಲ್ಲಿ ಮತ್ತೆ ಗರಿಗೆದರುತ್ತಿದೆ “ತಾರಾ ರಾಜಕೀಯ.” ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆಯೇ ಕಮಲ್ ಹಾಸನ್?

ಚೆನ್ನೈ (18/10/2020): ತಮಿಳುನಾಡಿನಲ್ಲಿ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಕಮಲ್ ಹಾಸನ್ ಅನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ “ಮಕ್ಕಳ್ ನೀತಿ ಮಯ್ಯಮ್” ಈಗಾಗಲೇ ಘೋಷಿಸಿದೆ. ಇದೀಗ ಕಾಂಗ್ರೆಸ್ ಮುಂದೆ ಬಂದು, ಕಮಲ್ ಹಾಸನನ್ನು ಯುಪಿಎ ಸೇರಲು ಆಹ್ವಾನಿಸಿದೆ. ಜಾತ್ಯತೀತ ನಿಲುವಿನ ಕಮಲ್ ಹಾಸನ್ ಜೊತೆಗೆ ಕಾರ್ಯನಿರ್ವಹಿಸಲು ನಮಗೆ ಸಾಧ್ಯವಾಗಲಿದೆ ಎಂದು ತಮಿಳುನಾಡಿನ ಕಾಂಗ್ರೆಸ್‌ ಅಧ್ಯಕ್ಷ ಕೆ‌ಎಸ್ ಅಳಗಿರಿ ತಿಳಿಸಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಮಲ್ ಹಾಸನರಿಗೆ ಸಾಧ್ಯವಾಗದು. ಸಮಾನ ಮನಸ್ಕ ಜನತೆಗಾಗಿ ಜೊತೆಯಾಗಿ ನಿಲ್ಲೋಣ ಎಂದೂ ಅವರು ಹೇಳಿದರು. … Read more

ಪದಬಳಕೆಯಲ್ಲಿ ಎಚ್ಚರವಿರಲಿ; ಬಿಜೆಪಿ ವಿರುದ್ಧ ಗುಡುಗಿದ ಚಿರಾಗ್ ಪಾಸ್ವಾನ್

chirag paswan

ಪಾಟ್ನಾ(18/10/2020): ತನ್ನ ವಿರುದ್ಧದ ಟೀಕೆಗೆ ಸ್ವಾಗತ, ಆದರೆ, ಪದಬಳಕೆಯಲ್ಲಿ ಎಚ್ಚರವಿರಲಿ ಎಂದು ಎಲ್ ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್  ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಮೋದಿ ಅಥವಾ ಬಿಜೆಪಿಯ ಯಾವುದೇ ನಾಯಕರು ತನ್ನ ವಿರುದ್ಧ ಟೀಕೆ ಮಾಡಲಿ. ಆ ಮೂಲಕ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಖುಷಿಪಡಿಸಿದರೆ ನನಗೇನೂ ಸಮಸ್ಯೆಯಿಲ್ಲ. ಆದರೆ, ಪದಬಳಕೆ ಮಾಡುವಾಗ ಮಾತ್ರ ಎಚ್ಚರವಿರಲಿ ಎಂದು ಅವರು ಗುಡುಗಿದ್ದಾರೆ. ಚಿರಾಗ್ ಪಾಸ್ವಾನ್ ತನ್ನನ್ನು ಮೋದಿಯ ಹನುಮಾನ್ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗ್ರಹ … Read more

ಹೈದರಾಬಾದ್; ಭಾರೀ ಮಳೆಗೆ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿಕೆ

hyderbad

ಹೈದರಾಬಾದ್(18/10/2020); ಹೈದರಬಾದ್ ನಗರದಲ್ಲಿ ಕಳೆದೊಂದು ವಾರದಿಂದ ಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೆಚ್ಚಿನ ಭಾಗಗಳ ಜನಜೀವನ ಅಸ್ತವ್ಯಸ್ತವಾಗಿದ್ದು,  ಸಾವಿನ ಸಂಖ್ಯೆ 50ಕ್ಕೇರಿದೆ. ಹಗಲು ಹೊತ್ತು ಮಳೆಯ ತೀವ್ರತೆ ಕಡಿಮೆಯಾಗಿದ್ದರೂ,  ರಾತ್ರಿಯಿಡೀ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಮತ್ತು ಪೊಲೀಸರು ಹೈದರಾಬಾದ್‌ನ ಮುಳುಗಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಈ ರೆಸ್ಟೋರೆಂಟಲ್ಲಿ ಮಾಸ್ಕ್ ತೆಗೆಯದೆಯೇ ಊಟ ಮಾಡಬಹುದು!

mask

ಕೋಲ್ಕತ್ತಾ(18/10/2020): ಕೊರೋನಾ ಹಾವಳಿ ಶುರುವಾದಂದಿನಿಂದ ಮಾಸ್ಕ್ ಎಲ್ಲರ ಬದುಕಿನ ಭಾಗವಾಗಿ ಬಿಟ್ಟಿದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಮಾಸ್ಕ್ ತೆಗೆಯುವುದು ಅನಿವಾರ್ಯವಾಗಿದೆ. ಉದಾಹರಣೆಗೆ ಊಟ ಮಾಡುವಾಗ. ಆದರೆ, ಪಶ್ಚಿಮ ಬಂಗಾಳದ ಕೋಲ್ಕತ್ತಾದ ರೆಸ್ಟೊರೆಂಟ್‌ ಒಂದರ ಮಾಲಕರು ಇದಕ್ಕೆ ವಿಶಿಷ್ಟ ಉಪಾಯ ಕಂಡುಕೊಂಡಿದ್ದಾರೆ. ಮಾಸ್ಕ್‌ ತೆಗೆಯದೆಯೇ ಆಹಾರ ಸೇವಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ! ಮಾಲಕರು ಮಾಡಿದ್ದಿಷ್ಟೇ.  ಜಿಪ್‌ ಇರುವ ಮಾಸ್ಕ್‌ಗಳನ್ನು  ಗ್ರಾಹಕರಿಗೆ ನೀಡಿದ್ದು. ಗ್ರಾಹಕರು ಆಹಾರ ತಿನ್ನುವಾಗ, ಜ್ಯೂಸ್‌, ನೀರು ಕುಡಿಯುವಾಗ ಮಾಸ್ಕ್‌ ಪೂರ್ಣ ತೆಗೆಯಬೇಕಿಲ್ಲ. ಮಾಸ್ಕ್ ಮಧ್ಯದಲ್ಲಿ ಜಿಪ್‌ ಅಳವಡಿಸಿರುವುದರಿಂದ, … Read more

ಪ್ರಕರಣ ದಾಖಲಿಸಿ ಮಹಿಳೆಯರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ; ಬಿಜೆಪಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್

kusuma

ಬೆಂಗಳೂರು(18/10/2020): ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರ  ವಿರುದ್ಧ ಬಿಜೆಪಿ ಪ್ರಕರಣ ದಾಖಲಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ. ಈ ಬಗ್ಗೆ  ಮಾತನಾಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ಬಿಜೆಪಿ ಮಹಿಳೆಯರ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಇದು ಕನಸಿನ ಮಾತು. ನಿಮ್ಮಿಂದ ಮಹಿಳೆಯರ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಸೋಲುವ ಭಯದಲ್ಲಿ ಇಂತಹ ಕೇಸ್ ದಾಖಲಿಸಿ ಬೆದರಿಸುವ  ಪ್ರಯತ್ನ ಮಾಡುತ್ತಿರುವಿರಿ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಬಿಜೆಪಿ … Read more

ಕಾಂಗ್ರೆಸ್ ಮುಖಂಡನ ಪುತ್ರ ಹೃದಯಾಘಾತದಿಂದ ನಿಧನ

ಶಿವಮೊಗ್ಗ(18/10/2020): ತೀವ್ರ ಹೃದಯಾಘಾತದಿಂದ  ‌ಕಾಂಗ್ರೆಸ್‌ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಪುತ್ರ  ಸುಹಾಸ್(35 ) ನಿಧನರಾಗಿದ್ದಾರೆ. ಸುಹಾನ್‌ ಅವರಿಗೆ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯ ಮಹಡಿಯಿಂದ ಇಳಿಯುವ ವೇಳೆ ಹೃದಯಾಘಾತದಿಂದಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದೇ ಮೃತ ಪಟ್ಟಿದ್ದಾರೆ. ಪರಿಷತ್‌ ಸದಸ್ಯ ಪ್ರಸನ್ನ ಕುಮಾರ್ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಕೊನೆಯ ಬಾರಿ ಮಗನ ಮುಖ ನೋಡುವ ಭಾಗ್ಯವೂ ಅವರಿಗಿಲ್ಲದಂತಾಗಿದೆ.

ಆಗ್ರಾದಲ್ಲಿ ಭಾರೀ ಸ್ಪೋಟ| ಮೂವರು ಸಾವು, ಹಲವರಿಗೆ ಗಾಯ

ಆಗ್ರಾ (18-10-2020): ಆಗ್ರಾದಲ್ಲಿ ಪಟಾಕಿ ದಾಸ್ತಾನು ತುಂಬಿದ ಗೋಡೌನ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿ ಮೂವರು ಅಪರಿಚಿತ ವ್ಯಕ್ತಿಗಳು ಸಾವನ್ನಪ್ಪಿದ್ದು ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿದ ನಂತರ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಪ್ರದೇಶವು ಹೊಗೆ ಮತ್ತು ಗಬ್ಬು ಮೋಡದಿಂದ ಆವೃತವಾಗಿದೆ. ಎರಡು ಕಿಲೋಮೀಟರ್ ದೂರಕ್ಕೆ ಸ್ಫೋಟ ಕೇಳಿಬಂದಿದೆ. ಪೃಥ್ವಿ ನಾಥ್ ಪೊಲೀಸ್ ಚೌಕಿಗೆ ಸಮೀಪವಿರುವ ಸನ್‌ಫ್ಲವರ್ ಶಾಲೆಯ ಸಮೀಪವಿರುವ ನ್ಯೂ ಅಜಮ್ ಪಾಡಾ ಗೊಡೌನ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಷಾ … Read more

ಮೆರವಣಿಗೆ, ಪ್ರವಚನ ನಿಷೇಧ: ಸರಕಾರದಿಂದ ಈದ್ ಮಿಲಾದ್ ಕುರಿತು ಮಾರ್ಗಸೂಚಿ ರಿಲೀಸ್

eid milad

ಬೆಂಗಳೂರು(18-10-2020): ಕೋವಿಡ್ ಅಟ್ಟಹಾಸದ ಹಿನ್ನೆಲೆಯಲ್ಲಿ ಈದ್ ಮಿಲಾದ್ ಆಚರಣೆಗೆ ಸರಕಾರ ಮಾರ್ಗಸೂಚಿ ರಿಲೀಸ್ ಮಾಡಿದೆ.  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ತಿಳಿಸಿದ್ದಾರೆ.  ಈದ್ ಮಿಲಾದ್ ಸಾಮೂಹಿಕ ಮೆರವಣಿಗೆಗೆ ನಿಷೇಧ ಹೇರಲಾಗಿದೆ. ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ನಿಷೇಧ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಮಸೀದಿಗಳಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯ ಎಂಬುದಾಗಿ ಮಾರ್ಗಸೂಚಿಯಲ್ಲಿ ತಿಳಿಸಿದೆ. ನಿಮಯಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮವನ್ನು ಕೈಗೊಳ್ಳುವ ಎಚ್ಚರಿಕೆಯನ್ನು … Read more

ಬಿಹಾರದಲ್ಲಿ ರಾಷ್ಟ್ರೀಯ ಲೋಕ ಸಮತಾ ಪಕ್ಷ ಇಬ್ಭಾಗ! ಒಂದು ಗುಂಪು ಬಿಜೆಪಿಯತ್ತ..

ಪಾಟ್ನಾ(18-10-2020):ಚುನಾವಣೆಗೆ ಬರೇ ಹತ್ತು ದಿನಗಳು ಬಾಕಿಯಿರುವತೆಯೇ ರಾಷ್ಟ್ರೀಯ ಲೋಕ ಸಮತಾ ಪಕ್ಷ ಇಬ್ಭಾಗವಾದ ಅಚ್ಚರಿದಾಯಕ ಬೆಳವಣಿಗೆ ಉಂಟಾಗಿದೆ. ಪಕ್ಷದ ರಾಷ್ಟ್ರೀಯ ಕಾರ್ರದರ್ಶಿ ಅರುಣ್ ಕುಶ್ವಾಹ ನೇತೃತ್ವದ ಒ0ದು ಗುಂಪು ಪಕ್ಷ ತೊರೆದು ಬಿಜೆಪಿ ಸೇರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ದೇಶವನ್ನು ಮುನ್ನಡೆಸಲು ಸಾಧ್ಯವಿದೆ. ತೃತೀಯ ರಂಗದ ಅಗತ್ಯತೆ ಇಲ್ಲವೆಂದು ಅರುಣ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹ ಮು0ದಾಳತ್ವದಲ್ಲಿ ತೃತೀಯ ರಂಗವು ಅಸ್ತಿತ್ವಕ್ಕೆ ಬಂದ ಬೆನ್ನಿಗೆ ಇ0ತಹ ವಿಲಕ್ಷಣ ಬೆಳವಣಿಗೆ ಉಂಟಾಗಿದೆ. ಆರ್‍ಜೆಡಿಯ … Read more