ಅತ್ಯಾಚಾರ ಆರೋಪಿ, ಬಿಜೆಪಿ ಮುಖಂಡನಿಗೆ ಸಂತ್ರಸ್ತೆಯ ಹೇಳಿಕೆಯ ಪ್ರತಿ ನೀಡಲು `ಸುಪ್ರೀಂ’ ನಿರಾಕರಣೆ

swami

ಹೊಸದೆಹಲಿ(08/10/2020): ಕಾನೂನು ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯು ನ್ಯಾಯಾಧೀಶರಿಗೆ  ನೀಡಿರುವ ಹೇಳಿಕೆಯ ಪ್ರತಿಯನ್ನು ಪಡೆಯಲು ಆರೋಪಿ, ಬಿಜೆಪಿ ಮುಖಂಡ ಚಿನ್ಮಯಾನಂದ ಅವರಿಗೆ ಸುಪ್ರೀಂ ಕೋರ್ಟ್‌ ಅವಕಾಶವನ್ನು ನಿರಾಕರಿಸಿದೆ. ಈ ಕುರಿತ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಹೈಕೋರ್ಟ್‌, 2019ರ ನ.7ರಂದು ಸಂತ್ರಸ್ತೆಯ ಹೇಳಿಕೆಯ ಪ್ರತಿಯನ್ನು ಆರೋಪಿಗೆ ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಆದೇಶಕ್ಕೆ ಕಳೆದ ವರ್ಷ ನವೆಂಬರ್‌ 15ರಂದು ಸುಪ್ರೀಂ … Read more

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

paaswan

ಹೊಸದೆಹಲಿ(08/10/2020): ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ದೆಹಲಿಯ ಆಸ್ಪತ್ರೆಯಲ್ಲಿ ಇಂದು ನಿಧನರಾಗಿರುವುದಾಗಿ ಅವರ ಪುತ್ರ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಸ್ವಾನ್ ಇತ್ತೀಗಷ್ಟೇ ಹೃದಯ ಸರ್ಜರಿ ಮಾಡಿಕೊಂಡಿದ್ದರು.

ವಿಟ್ಲ: ಸಮಸ್ತ ಹನೀಫಿ ಉಲಮಾ ಒಕ್ಕೂಟದಿಂದ ಮದ್ರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ

skssf

ವಿಟ್ಲ(08/10/2020): ಕೋರೋನಾ ಕಾರಣದಿಂದ ಕೆಲಸ ಮತ್ತು ವೇತನವಿಲ್ಲದೆ ಸಂಕಷ್ಟದಲ್ಲಿರುವ ಸುಮಾರು ಐವತ್ತಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರಿಗೆ ಕರ್ನಾಟಕ ರಾಜ್ಯ ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದ ವತಿಯಿಂದ ದಿನ ಬಳಕೆಯ ದಿನಸಿ ಸಾಮಾನುಗಳ ಕಿಟ್ ಗಳನ್ನು ಹಾಗೂ ಎರಡು ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ ಧನಸಹಾಯವನ್ನು ಇಂದು ವಿಟ್ಲ ದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.     ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಕೋವಿಡ್ … Read more

ಟಿಆರ್‌ಪಿ ವಂಚನೆ: ಟಿ.ವಿ. ಚಾನೆಲ್‌ಗಳ ಮಾಲೀಕರ ಬಂಧನ; ರಿಪಬ್ಲಿಕ್ ಟಿವಿಗೆ ಸಮನ್ಸ್

arnab

ಮುಂಬೈ(08/10/2020): ಟಿವಿ ಚಾನೆಲ್‌ ವೀಕ್ಷಕರ ಪ್ರಮಾಣ ಲೆಕ್ಕ ಹಾಕಲು ಬಳಕೆಯಾಗುತ್ತಿರುವ ಮಾನದಂಡವಾದ ಟಿಆರ್‌ಪಿಯನ್ನು ತಿರುಚಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದ್ದು,  ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್‌ಗಳನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅತಿ ಹೆಚ್ಚು TRP ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ರಿಪಬ್ಲಿಕ್ ಟಿವಿಯ ಅಧಿಕಾರಿಗಳನ್ನು ತನಿಖೆಗೆ ಇಂದು ಅಥವಾ ನಾಳೆ ಕರೆಸಲಾಗುವುದು ಎನ್‌ಡಿಟಿವಿ ವರದಿ ಮಾಡಿದೆ. ಮೂರು ಟಿವಿ ಚಾನೆಲ್‌ಗಳ ಟಿಆರ್‌ಪಿ ವಂಚನೆಯನ್ನು ಮುಂಬೈ ಪೊಲೀಸರು ಬಯಲು ಮಾಡಿದ್ದು, ರಿಪಬ್ಲಿಕ್‌ ಟಿವಿ ನಿರ್ದೇಶಕರಿಗೆ ಸಮನ್ಸ್ ನೀಡಲಾಗಿದೆ. … Read more

ಆದಿತ್ಯನಾಥ್ ಸರಕಾರ ಜಂಗಲ್ ರಾಜ್ ಸರಕಾರ: ಪಿಎಫ್ ಐ ಆರೋಪ

pfi protest

ಬಂಟ್ವಾಳ(08/10/2020): ಹಾಥರಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಉತ್ತರ ಪ್ರದೇಶದ ಬಿಜೆಪಿ ಸರಕಾರ ತನಗೆ ಜಾಗತಿಕ ಮಟ್ಟದಲ್ಲಿ ಆಗಿರುವ ಮುಜುಗರವನ್ನು ತಪ್ಪಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು  ಪಿಎಫ್ ಐ ಬಂಟ್ವಾಳ ತಾಲೂಕು ಸಮಿತಿ ಆರೋಪಿಸಿದೆ.  ಇಂದು ಬಿ.ಸಿ.ರೋಡಿ‌ನಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ  ಈ ಆರೋಪ ಮಾಡಿದೆ. ಆದಿತ್ಯನಾಥ್ ಸರಕಾರ ಜಂಗಲ್ ರಾಜ್ ಆಗಿ ಮಾರ್ಪಟ್ಟಿದ್ದು ಅಲ್ಲಿ ಕಾನೂನು ಸುವ್ಯವಸ್ಥೆ … Read more

ಗೂಗಲ್ ಪೇಯಲ್ಲಿ ಬಂತು ಸಾವಿರಾರು ರುಪಾಯಿ; ಆಟೋ ಚಾಲಕ ಮಾಡಿದ್ದು ಕೇಳಿದರೆ ನೀವು ಅಭಿನಂದಿಸುವಿರಿ

auto

ಬೆಂಗಳೂರು(08/10/2020): ಗೂಗಲ್  ಪೇ ಮೂಲಕ ತನ್ನ  ಖಾತೆಗೆ ಬಂದು ಬಿದ್ದ ಸಾವಿರಾರು ರುಪಾಯಿಯನ್ನು ಮರಳಿಸಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ. ಕೆ.ಆರ್. ಪುರಂ, ಹೂಡಿ ಆಸುಪಾಸಿನಲ್ಲಿ ಆಟೋ ಓಡಿಸಿ ಜೀವನದ ಬಂಡಿ ದೂಡುತ್ತಿರುವ  ಹರೀಶ್ ಎಂಬವರೇ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದವರು. ಮಂಗಳೂರು ಮೂಲದ ಸತ್ತಾರ್‌ ಎಂಬ ಯುವಕ ಗೆಳೆಯನ ಅಂಗಡಿಗೆ ಫರ್ನೀಚರ್ ಮಾಡಿಸಲು ಹಾರ್ಡ್‌ವೇರ್ ಸಾಮಾಗ್ರಿಗಳನ್ನು ಹರೀಸ್ ರ ಆಟೋದಲ್ಲಿ ಸಾಗಿಸಿ, ಗೂಗಲ್ ಪೇ ಮೂಲಕ ಬಾಡಿಗೆ ನೀಡಿದ್ದರು. ಬಳಿಕ ಹರೀಸ್ ಅಲ್ಲಿಂದ … Read more

2020ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್‌ ಪ್ರಶಸ್ತಿ ಘೋಷಣೆ: ವಿಜೇತೆ ಯಾರು ಗೊತ್ತಾ?

lousie gluck

ಸ್ಟಾಕ್‌ಹೋಮ್‌(08/10/2020): 2020ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್‌ ಪ್ರಶಸ್ತಿ ಪ್ರಕಟಗೊಂಡಿದೆ. ಅಮೆರಿಕದ ಕವಯತ್ರಿ ಲೂಯಿಸ್‌ ಗ್ಲುಕ್ಸ್‌ ಅವರನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 1943ರಲ್ಲಿ  ನ್ಯೂಯಾರ್ಕ್‌ನಲ್ಲಿ ಜನಿಸಿದ ಲೂಯಿಸ್‌  ಮ್ಯಾಸುಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಯೇಲ್‌ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೊದಲ ಕವನ ಸಂಕಲನ ‘ಫಸ್ಟ್‌ಬಾರ್ನ್‌’ (Firstborn). ಒಟ್ಟು ಹನ್ನೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಸಿದ್ಧ ಕವನ ಸಂಕಲನ ‘ದಿ ವೈಲ್ಡ್‌ ಐರಿಸ್‌’ ಗೆ ಅವರು ಪತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯರ ಸ್ಕಾಲರ್ ಶಿಫ್‌ ಅರ್ಜಿಗೆ ಆಹ್ವಾನ

scholorship

ಬೆಂಗಳೂರು(08/10/2020): ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ದ, ಪಾರ್ಸಿ, ಜೈನ) ವರ್ಗದ 9,10,11, ಹಾಗೂ 12ನೇ ತಗರತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ (ವಿದ್ಯಾರ್ಥಿನಿಯರು) ನೀಡಲ್ಪಡುವ ಹಝ್ರತ್ ಬೇಗಂ ಮಹಲ್ (ಮೌಲಾನಾ ಅಝಾದ್) ಸ್ಕಾಲರ್ ಶಿಪ್ ಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.* ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಕೊನೆ ದಿನಾಂಕವಾಗಿರುತ್ತದೆ. ಅರ್ಹ ವಿದ್ಯಾರ್ಥಿನಿಯರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಿ. ಬೇಕಾಗುವ ದಾಖಲೆಗಳು: 1. ಪೋಷಕರ ವಾರ್ಷಿಕ ಆದಾಯ ಪ್ರಮಾಣ ಪತ್ರ  … Read more

ಜಮೀನಿನಲ್ಲಿ 100, 2,000 ಮುಖಬೆಲೆಯ ಕಂತೆ-ಕಂತೆ ಹಣ ಪತ್ತೆ!

money

ಚಿತ್ರದುರ್ಗ(08-10-2020): ಜಮೀನೊಂದರಲ್ಲಿ 50, 100 ಹಾಗೂ 2,000 ಮುಖಬೆಲೆಯ ಕಂತೆ-ಕಂತೆ ಹಣ ಚಳ್ಳಕೆರೆ ತಾಲ್ಲೂಕಿನ ಬುಕ್ಲೊರ ಹಳ್ಳಿಯಲ್ಲಿ ಪತ್ತೆಯಾಗಿದೆ. ಪೊದೆಯ ಸಮೀಪ ಹಣ ಇರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಸಿಪಿಐ ಮಂಜುನಾಥ್‌ ಮತ್ತು ಎಸ್‌ಐ ಸತೀಶನಾಯ್ಕ್‌ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಇದೇ ಜಮೀನಿನ ಪಕ್ಕದಲ್ಲಿರುವ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್‌ ಕಂಪನಿಯ ಕಚೇರಿಯಲ್ಲಿ 36ಲಕ್ಷ ಹಣ ಕಳ್ಳತನವಾಗಿತ್ತು. ಈ ಕುರಿತು ತನಿಖೆ … Read more

ನಬಣ್ಣ ಚಲೋ; ಬಂದೂಕು ಹಿಡಿದುಕೊಂಡು ಬೀದಿಗಿಳಿದಿದ್ದ ಬಿಜೆಪಿ ಕಾರ್ಯಕರ್ತರು!

ಕಲ್ಕತ್ತಾ(08-10-2020): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ನಬಣ್ಣ ಚಲೋ ಪ್ರತಿಭಟನೆಯಲ್ಲಿ ಕೇಸರಿ ಪಕ್ಷದ ಕಾರ್ಯಕರ್ತರು ಬಂದೂಕು ಹಿಡಿದುಕೊಂಡು ಬೀದಿಗಿಳಿದಿದ್ದರು ಎಂದು ವರದಿಯಾಗಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಪೊಲೀಸರು ಕೇಸರಿ ಪಕ್ಷದ ಕಾರ್ಯಕರ್ತರಿಂದ ಬಂದೂಕು ವಶಪಡಿಸಿಕೊಂಡಿದ್ದಾರೆ. ಬಂದೂಕು ಬಿಜೆಪಿ ಕಾರ್ಯಕರ್ತರ ಕೈಗೆ ಹೇಗೆ ಬಂತು ಎನ್ನುವುದು ತಿಳಿದುಬರಬೇಕಿದೆ. ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸಚಿವಾಲಯದ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಆದರೆ ಪೊಲೀಸರು … Read more