ಲಕ್ನೋ(28-02-2021): ಉತ್ತರ ಪ್ರದೇಶದಲ್ಲಿ ಒಂಬತ್ತು ವರ್ಷದ ಬಾಲಕನನ್ನು ಇಬ್ಬರು ಯುವಕರು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಬಲರಾಂಪುರ್ ಜಿಲ್ಲೆಯ ಹಳ್ಳಿಯ ನಿವಾಸಿ ಒಂಬತ್ತು ವರ್ಷದ ಬಾಲಕ ಫೆಬ್ರವರಿ 14 ರಂದು ಸ್ಥಳೀಯ ಜಾತ್ರೆಗೆ ಹೋಗಿದ್ದ. ಜಾತ್ರೆಯಲ್ಲಿ ಆತ ನಾಪತ್ತೆಯಾಗಿದ್ದು, ಆತನ ತಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ, ನಾಪತ್ತೆಯಾದ ಬಾಲಕನ ಶವವನ್ನು ಗ್ರಾಮದ ಕೊಳದ ಬಳಿ ಬ್ಯಾಗ್ನಲ್ಲಿ ತುಂಬಿಸಿಡಲಾಗಿತ್ತು. ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಕೊಲೆಯಾಗುವ ಮೊದಲು ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬಾಲಕನ ಮರಣೋತ್ತರ ವರದಿಯಲ್ಲಿ ದೃಢಪಟ್ಟಿದೆ. ಪೊಲೀಸರು ಅನುಮಾನದ ಆಧಾರದ ಮೇಲೆ, ಇಬ್ಬರು ಸ್ಥಳೀಯ ಯುವಕರನ್ನು ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ ವಶಕ್ಕೆ ತೆಗೆಪಡೆದುಕೊಂಡು ವಿಚಾರಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಲೈಂಗಿಕ ದೌರ್ಜನ್ಯದ ಬಳಿಕ ಬಾಲಕ ಪ್ರಜ್ಞೆ ತಪ್ಪಿದ್ದರಿಂದ ಆರೋಪಿಗಳು ಭಯಭೀತರಾಗಿ ಅವನನ್ನು ಕೊಲ್ಲಲು ನಿರ್ಧರಿಸಿದರು. ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿ ಆತನ ದೇಹವನ್ನು ಹತ್ತಿರದ ಕೊಳದಲ್ಲಿ ವಿಲೇವಾರಿ ಮಾಡಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.