18 ವರ್ಷಗಳ ಸಿನಿ ಜರ್ನಿ, ಕೃತಜ್ಞತೆ ಸಲ್ಲಿಸಿದ ನಟ ಅಲ್ಲು ಅರ್ಜುನ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೈದರಾಬಾದ್ : ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಖ್ಯಾತಿಯ ಅಲ್ಲು ಅರ್ಜುನ್ ಚಿತ್ರರಂಗದ ಪ್ರವೇಶಿಸಿ 18 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳು ಸಲ್ಲಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಎಲ್ಲಾ ಸಿನಿ ಪ್ರಿಯರಿಗೆ ಕೃತಜ್ಞತೆಗಳು ತಿಳಿಸಿದ್ದಾರೆ.

“ನನ್ನ ಮೊದಲ ಚಿತ್ರ ಬಿಡುಗಡೆಯಾಗಿ 18 ವರ್ಷಗಳು ಕಳೆದಿವೆ. ನನ್ನ 18 ವರ್ಷದ ಸಿನೆಮಾ ಪಯಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. ಈ ವರ್ಷಗಳಲ್ಲಿ ತುಂತುರು ಮಳೆ ಸುರಿಸಿದ ಎಲ್ಲ ಪ್ರೀತಿಗಾಗಿ ನಾನು ನಿಜವಾಗಿಯೂ ಆಶೀರ್ವದಿಸುತ್ತೇನೆ. ಎಲ್ಲರ ಆಶೀರ್ವಾದಗಳಿಗೆ ಧನ್ಯವಾದಗಳು.” ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

2004ರಲ್ಲಿ ಬಿಡುಗಡೆಯಾದ ‘ಆರ್ಯ’ ಚಿತ್ರ ಅಲ್ಲು ಅರ್ಜುನ್ ಗೆ ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ತದನಂತರ ಬನ್ನಿ, ಹ್ಯಾಪಿ, ಆರ್ಯ – 2, ವರುಡು, ಪರುಗು, ಜುಲಾಯಿ, ಬದ್ರಿನಾಥ, ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಬಿಡುಗಡೆಯಾದ ‘ಅಲಾ ವೈಕುಂಠಪುರಮುಲು’ ಬ್ಲಾಕ್ ಬಾಸ್ಟಾರ್ ಮೂವೀಯ “ಬುಟ್ಟಾ ಬೊಮ್ಮಾ” ಹಾಡು ಅತಿಹೆಚ್ಚು ಜನಮನ ಗಳಿಸಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು