17 ಜನ ಪಕ್ಷಾಂತರಿಗಳ ಕಾಲು ಹಿಡಿದು ಅಧಿಕಾರಕ್ಕೇರಿದ್ದು ಮರೆತು ಹೊಯ್ತೆ?: ನಳೀನ್ ಕುಮಾರ್ ಗೆ ಕಾಂಗ್ರೆಸ್ ತಿರುಗೇಟು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೆಜೆಪಿ ಪರ್ವದಲ್ಲಿ ಬಿ.ಎಸ್.ವೈ ಅವರನ್ನ ಹೇಗೆ ನಡೆಸಿಕೊಂಡಿರಿ, ಈಗಲೂ ಅದೇ ಮಾದರಿಯಲ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದೀರಿ ಎಂಬುದನ್ನ ಹೇಳಬೇಕೆ? 17 ಜನ ಪಕ್ಷಾಂತರಿಗಳ ಕಾಲು ಹಿಡಿದು ಅಧಿಕಾರಕ್ಕೇರಿದ್ದು ಮರೆತು ಹೊಯ್ತೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ

ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥ ನಾಯಕ ಅಲ್ಲ, ಹೀಗಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಮಾಡಿತ್ತು ಎಂದು ನಳಿನ್ ಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದರು, ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಕೆಜೆಪಿಯಲ್ಲಿದ್ದಾಗ ನೀವು BSY ಅವರನ್ನ, ಅವರು BJPಯನ್ನ ಹೇಗೆಲ್ಲ ಬೈದಾಡಿಕೊಂಡಿದ್ದೀರಿ ನೆನಪಿದೆಯೇ? ನಳೀನ್ ಕುಮಾರ್ ಅವರೇ, ಯಾರು ಸಮರ್ಥರು ಯಾರು ಅಸಮರ್ಥರು ಎನ್ನುವುದನ್ನ ರಾಜ್ಯ ಕಂಡಿದೆ ಎಂದು ಟಾಂಗ್ ಕೊಟ್ಟಿದೆ.

ಜನತೆಯ ಬೇಡಿಕೆಗಳಿಗೆ ಕಾಂಗ್ರೆಸ್ ಯಾವತ್ತಿಗೂ ‘ನೋಟ್ ಪ್ರಿಂಟ್ ಮೆಷಿನ್ ಇಟ್ಟಿಲ್ಲ’ ‘ ನೇಣು ಹಾಕ್ಕೋಬೇಕಾ’ ‘ತಂತಿ ಮೇಲೆ ನಡೆಯುತ್ತಿದ್ದೇನೆ’ ಎಂಬಂತಹ ಅಸಹಾಯಕತೆ ವ್ಯಕ್ತಪಡಿಸಲಿಲ್ಲ.
ಆಂತರಿಕ ಕಲಹ ನಿಭಾಯಿಸಲಾಗದ ತಾವು ಅಸಮರ್ಥ ಅಧ್ಯಕ್ಷ ಅಲ್ಲವೇ? ನಳೀನ್ ಕುಮಾರ್ ಅವರೇ, ಪ್ರತಿಪಕ್ಷವಾಗಿ ಏನು ಮಾಡಬೇಕು ಎಂಬುದನ್ನ ದೇಶ ಕಟ್ಟಿದ ಕಾಂಗ್ರೆಸ್‌ಗೆ ತಾವು ಹೇಳಬೇಕಿಲ್ಲ. ಇತ್ತೀಚಿಗೆ ಹುಟ್ಟಿಕೊಂಡ ತಮ್ಮ ಪಕ್ಷಕ್ಕೆ ಭ್ರಷ್ಟಾಚಾರದ ಹೊರತಾಗಿ ಆಡಳಿತ ತಿಳಿದಿಲ್ಲ ಎನ್ನುವುದು ಕರೋನಾ ನಿರ್ವಹಣೆಯಲ್ಲಿಯೇ ಕಾಣುತ್ತಿದೆ. ನಿಮ್ಮ ಕಚ್ಚಾಟ ರಾಜ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಅದನ್ನು ನಿಭಾಯಿಸಿ ಎಂದು ಪ್ರತ್ಯುತ್ತರ ನೀಡಿದೆ.

ರಾಜ್ಯ ಬಿಜೆಪಿ ಸರ್ಕಾರ ಕಳೆದ ಭಾರಿಯ ಲಾಕ್‌ಡೌನ್ ಪರಿಹಾರ ಘೋಷಣೆ ಮಾಡಿ ಇಂದಿಗೂ ಫಲಾನುಭವಿಗಳಿಗೆ ಹಣ ನೀಡದೆ ಇರುವುದೇಕೆ?
ಅನ್ನಭಾಗ್ಯವನ್ನು ಸಿದ್ದರಾಮಯ್ಯ ಅವರು ಮನೆಯಿಂದ ತಂದು ಕೊಟ್ಟರಾ ಎಂದು ಕೇಳುವಾಗ ನಿಮಗೆ ಈ ಪ್ರಜ್ಞೆ ಇರಲಿಲ್ಲವೇ? ಜನತೆಯ ಹಣದಲ್ಲೇ ಜನತೆಗೆ
ಉಚಿತ ಲಸಿಕೆ ನೀಡದೆ ₹  900 ಗಳಿಗೆ ಮಾರಿಕೊಳ್ಳುತ್ತಿರುವುದೇಕೆ? ರಾಜ್ಯ ಜನರ ಹಣವನ್ನು ಜನರಿಗೇ ಮರಳಿಸುವ ಯೋಜನೆಗಳನ್ನು ‘ಬಿಟ್ಟಿ ಭಾಗ್ಯ’ ಎಂದು ಜನರ ಬೆವರಿಗೆ ಅವಮಾನ ಮಾಡುವ ರಾಜ್ಯ ಬಿಜೆಪಿ ಸರ್ಕಾರ ಹೇಳಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಜನತೆಯ ಹಣವನ್ನು ಜನತೆಗೆ ನೀಡಲಾಗದೆ ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದಿದ್ದೇಕೆ? ಸಮರ್ಪಕ ಪ್ಯಾಕೇಜ್ ಮೂಲಕ ಜನರ ಹಣ ಮರಳಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಏಕೆ? ಜನರ ಹಣವನ್ನು ಪೂರಾ ನುಂಗಿಬಿಟ್ಟಿರಾ? ಎಂದು ಕಾಂಗ್ರೆಸ್ ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು