ವಿಧಾನ ಪರಿಷತ್ ನ 14 ಸದಸ್ಯರು ಅಮಾನತು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸಭಾಪತಿ ಅದೇಶ ಉಲ್ಲಂಘನೆ ಮಾಡಿದ ಕಾರಣ, ಕರ್ನಾಟಕ ವಿಧಾನ ವಿಧಾನಪರಿಷತ್ ನ 14 ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಈ ಆದೇಶ ನೀಡಿದ್ದು, ಸದನದ ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಗೊಳಿಸಲಾಗಿದೆ.

ಸಿಎಂ ಇಬ್ರಾಹಿಂ, ಎಸ್‌.ಆರ್‌ ಪಾಟೀಲ್‌, ಪಿ.ಆರ್ ರಮೇಶ್‌, ಪ್ರತಾಪ್‌ ಚಂದ್ರ ಶೆಟ್ಟಿ, ನಾರಾಯಣ ಸ್ವಾಮಿ, ಯು.ಬಿ ವೆಂಕಟೇಶ್‌, ನಜೀರ್‌ ಆಹ್ಮದ್‌, ಬಿಕೆ ಹರಿಪ್ರಸಾದ್, ಯಬಿ ವೆಂಕಟೇಶ್, ವೀಣಾ ಅಚ್ಚಯ್ಯ ಸೇರಿ 14 ಮಂದಿಯನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಆದೇಶ ಹೊರಡಿಸಿದ್ದಾರೆ.

ಸದಸ್ಯರನ್ನು ಅಮಾನತುಗೊಳಿಸಿದ್ದಕ್ಕೆ ಕಾಂಗ್ರೆಸ್ ಸದಸ್ಯರು ವಿಧಾನಪರಿಷತ್ತಿ ನಲ್ಲಿ ಗದ್ದಲ ನಡೆಸಿ, ಪ್ರತಿಭಟನೆ ಮಾಡಿದ್ದಾರೆ. ಪರಿಣಾಮವಾಗಿ ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು