ಬಹಿರ್ದೆಸೆಗೆ ತೆರಳಿದ್ದ ಬಾಲಕಿಗೆ ಇಟ್ಟಿಗೆಯಿಂದ ಹೊಡೆದು ಕೊಲೆ!

police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ (10-02-2020): ಪೂರ್ವ ಉತ್ತರ ಪ್ರದೇಶದ ಭಾದೋಹಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 11 ವರ್ಷದ ಬಾಲಕಿಯನ್ನು ಇಟ್ಟಿಗೆಗಳಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.

ಹತ್ರಾಸ್ ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಬಹಿರ್ದೆಸೆಗೆ ಹೊಲಕ್ಕೆ ತೆರಳಿದ್ದ ಬಾಲಕಿ ಮನೆಗೆ ಬಂದಿಲ್ಲ. ಆಕೆಯನ್ನು ಹುಡುಕಲು ಹೋದಾಗ ಆಕೆಯ ಶವ ಪತ್ತೆಯಾಗಿದೆ.

ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.ಇದು ಅತ್ಯಾಚಾರದ ಪ್ರಕರಣವಾಗಿರಬಹುದು. ಬೇರೆ ಉದ್ದೇಶಗಳಿಂದ ಕೊಲೆ ಸಾಧ್ಯತೆ ಕಡಿಮೆ. ಮಗುವಿಗೆ ಕೇವಲ 11 ವರ್ಷ. ಆಕೆಗೆ ಯಾರೊಂದಿಗೂ ದ್ವೇಷವಿರಲಿಲ್ಲ. ಆದರೆ ಮರಣೋತ್ತರ ವರದಿ ಇದ್ದಾಗ ಮಾತ್ರ ಇದು ದೃಢವಾಗುತ್ತದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಬದನ್ ಸಿಂಗ್ ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು