100 ಕೋಟಿ ಡೋಸ್ ಲಸಿಕೆ ವಿತರಣೆ : ಲಸಿಕಾ ಅಭಿಯಾನದಲ್ಲಿ ಭಾರತ ಹೊಸ ಮೈಲಿಗಲ್ಲು

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶಾದ್ಯಂತ ಕೋವಿಡ್‌ ಪಿಡುಗಿನ ವಿರುದ್ಧ ಆರಂಭವಾದ ಲಸಿಕಾ ಅಭಿಯಾನಕ್ಕೆ ಈಗ 9 ತಿಂಗಳ ಪೂರ್ಣಗೊಂಡಿದೆ. 9 ತಿಂಗಳ ಬಳಿಕ 100 ಕೋಟಿ ಡೋಸ್‌ಗಳನ್ನು ಪೂರ್ಣಗೊಳಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸಲು ಆರಂಭಿಸಿದ ಲಸಿಕೆ ಅಭಿಯಾನ ಯಶಸ್ಸು ಕಾಣುವ ಮೂಲಕ ಭಾರತವು ಮಹತ್ವದ ಮೈಲಿಗಲ್ಲನ್ನು ಗುರುವಾರ ದಾಖಲಿಸಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೋವಿನ್‌ ಪೋರ್ಟಲ್‌ನಲ್ಲಿ ಬುಧವಾರ ದಾಖಲಾಗಿದ್ದ ಅಂಕಿ ಅಂಶಗಳ ಪ್ರಕಾರ ಇಲ್ಲಿಯವರೆಗೆ ದೇಶದಾದ್ಯಂತ 99.85 ಕೋಟಿ ಡೋಸ್‌ ಲಸಿಕೆ ನೀಡಲಾಗಿತ್ತು. ವಯಸ್ಕರಲ್ಲಿ ಶೇ. 75ರಷ್ಟು ಜನರು ಮೊದಲ ಡೋಸ್‌ ಪಡೆದಿದ್ದರೆ, ಶೇ. 31ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಅರ್ಹತೆ ಪಡೆದಿರುವ ಎಲ್ಲರೂ ವಿಳಂಬ ಮಾಡದೇ ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಕೋರಿರುವ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು, ಈ ಮೂಲಕ ಭಾರತದ ಐತಿಹಾಸಿಕ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.

ದೇಶದಲ್ಲಿ 100 ಕೋಟಿ ಡೋಸ್‌ ಲಸಿಕೆ ಹಾಕಿದ ಸಾಧನೆಯ ಬಗ್ಗೆ ರೈಲು, ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಧ್ವನಿವರ್ಧಕಗಳ ಮೂಲಕ ಮಾಹಿತಿ ಭಿತ್ತರಿಸಲು ಸರ್ಕಾರ ಯೋಜಿಸಿದೆ. ಅಲ್ಲದೆ ಈ ವೇಳೆ ದೆಹಲಿಯ ಕೆಂಪುಕೋಟೆಯಲ್ಲೂ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಗಾಯಕ ಕೈಲಾಶ್​ ಖೇರ್​ ಅವರ ಹಾಡನ್ನು ಬಿಡುಗಡೆಗೊಳಿಸಲಿದ್ದಾರೆ. ಬಳಿಕ 1,400 ಕೆಜಿ ತೂಕದ ಅತಿದೊಡ್ಡ ರಾಷ್ಟ್ರಧ್ವಜವನ್ನು ಹಾರಿಸುವ ನಿರೀಕ್ಷೆಯಿದೆ.

 

ಜಗತ್ತಿನಲ್ಲಿ ಚೀನಾ ಮಾತ್ರ 100 ಕೋಟಿ ಡೋಸ್‌ ಲಸಿಕೆ ನೀಡಿರುವ ಪ್ರಥಮವಾಗಿ ಸಾಧನೆ ಮಾಡಿದ ರಾಷ್ಟ್ರವಾದರೆ 100 ಕೋಟಿ ಡೋಸ್ ಲಸಿಕೆ ಪೂರೈಸಿದ ಭಾರತವು ಹೊಸ ಮೈಲಿಗಲ್ಲು ದಾಟಿರುವ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು