ಜಿದ್ದಾ (18-10-2020): ಕೊರೋನಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಸೌದಿ ಅರೇಬಿಯಾದಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಆನ್ಲೈನ್ ತರಗತಿಗಳು ಈಗಲೂ ಮುಂದುವರಿಯುತ್ತಿದೆ. ಜನರು ಖಾಸಗಿ ಶಾಲೆಗಳನ್ನು ತ್ಯಜಿಸಿ, ಸರಕಾರೀ ಶಾಲೆಗಳನ್ನು ಅವಲಂಬಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದು ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆಯುವ ಸಾಧ್ಯತೆಯಿದೆ ಎಂದು ಸೌದಿ ಕೌನ್ಸಿಲ್ ಆಫ್ ಚೇಂಬರ್ಸ್ ನ ವಿದ್ಯಾಭ್ಯಾಸ ಪರಿಶೋಧಕ ಮಂಡಳಿಯ ಅಬ್ದುಲ್ ಅಝೀಝ್ ಅಲ್ ಅವಾದ್ ಹೇಳಿದ್ದಾರೆ.
ಹೊಸದಾಗಿ ಶಾಲೆಗೆ ಸೇರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆರ್ಥಿಕ ಅಡಚಣೆಯನ್ನು ಸರಿದೂಗಿಸುವ ಸಲುವಾಗಿ ಶಾಲೆಗಳೂ ತಮ್ಮ ಉದ್ಯೋಗಿಗಳು ಕೈ ಬಿಡುತ್ತಿವೆ. ನಲವತ್ತು ಶೇಕಡಾದಷ್ಟು ಶಾಲಾ ಸಿಬ್ಬಂದಿಗಳು ಈಗಾಗಲೇ ಉದ್ಯೋಗ ನಷ್ಟಕ್ಕೊಳಗಾಗಿದ್ದಾರೆ.