ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಳ್ಳುವವರಿಗೆ ಕಿರುಕುಳ ಕೊಡಬೇಡಿ : ಸು.ಕೋ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ತಮ್ಮ ಅಳಲು ತೋಡಿಕೊಂಡರೆ ಅಂಥವರಿಗೆ ಕಿರುಕುಳ ನೀಡದಿರಿ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿ, ಪರಿಹಾರಕ್ಕಾಗಿ ಆಗ್ರಹಿಸುವವರಿಗೆ ಕಿರುಕುಳ ಕೊಟ್ಟರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಕೊಟ್ಟಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರು ಸುಳ್ಳು ದೂರುಗಳನ್ನು ದಾಖಲಿಸುತ್ತಾರೆ. ಅಗತ್ಯವಿಲ್ಲದಿದ್ದರೂ ನೆರವು ಯಾಚಿಸುತ್ತಾರೆ ಎಂಬ ಕಾರಣ ನೀಡಿ, ನೆರವು ನಿರಾಕರಿಸಬಾರದು ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಹೇಳಿದೆ.

ಓರ್ವ ನ್ಯಾಯಾಧೀಶನಾಗಿ, ಓರ್ವ ನಾಗರಿಕನಾಗಿ ನನಗಿದು ಕಳವಳ ಪಡುವ ವಿಚಾರವಾಗಿದೆ. ಮಾಹಿತಿ ಪ್ರಸಾರಕ್ಕೆ ನಾವು ಯಾವುದೇ ಅಡೆತಡೆ ನೀಡಬಾರದು. ಜನರ ಅಳಲಿಗೆ ಕಿವಿಯಾಗಬೇಕು. ಕೋವಿಡಿನಿಂದಾಗಿ ಸಮಸ್ಯೆಗಳಿಗೆ ಸಿಲುಕಿದಾಗ, ಅವರು ಸಾಮಾಜಿಕ ಜಾಲತಾಣಗಳ ಮೂಲಕ ಅಳಲು ತೋಡಿಕೊಂಡರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬಾರದು ಎಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು