ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದ ಸಮೀಪ ಸೋಮವಾರ ಮಧ್ಯಾಹ್ನ ನಂತರ ಉಂಟಾದ ಉಗ್ರರ ದಾಳಿಗೆ ಇಬ್ಬರು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು; ಮೂವರು ಗಾಯಾಳುಗಳಾಗಿದ್ದಾರೆಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಚತುಪ್ ಎಂಬ ದಾರಿಯಾಗಿ ಉಗ್ರರು ಆಗಮಿಸಿದ್ದರೆಂದು ಪೋಲಿಸ್ ಮೂಲಗಳು ತಿಳಿಸಿವೆ. ಉಗ್ರರು ಪರಾರಿಯಾಗಿದ್ದಾರೆಯೇ ಅಥವಾ ಸೆರೆಯಾಗಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ. ಸುತ್ತಮುತ್ತಲಿನಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಒಂದು ವಾರದ ಅವಧಿಯಲ್ಲಿ ಇದು ನಾಲ್ಕನೆಯ ಉಗ್ರರ ಆಕ್ರಮಣವಾಗಿದೆ.
