ವಾಯು ಮಾಲಿನ್ಯಕ್ಕೂ ಕೊರೋನಾ ವೈರಸ್ಸಿಗೂ ಏನು ಸಂಬಂಧ? ತಜ್ಞರ ಮುನ್ನೆಚ್ಚರಿಕೆಗಳೇನು?

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೆಹಲಿ (19-10-2020): ವಾಯುಮಾಲಿನ್ಯದಿಂದಾಗಿ ಕೊರೋನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತವೆಯೆನ್ನುವುದು ತಜ್ಞರ ನುಡಿ. ಮಾತ್ರಲ್ಲದೇ ಕೊರೋನಾದಿಂದಾಗಿ ಮರಣಹೊಂದುವವರ ಪ್ರಮಾಣವೂ ಜಾಸ್ತಿಯಾಗುವುದು. ಕೊರೋನಾದಿಂದ ಗುಣಮುಖರಾದವರಿಗೂ ಕೂಡಾ ಇದು ಅಪಾಯಕಾರಿಯಾಗಿದೆ.

ವಾಯುಮಾಲಿನ್ಯ ಹೆಚ್ಚಾದಂತೆ ನಾವು ಒಳ ತೆಗೆದುಕೊಳ್ಳುವ ವಾಯುವಿನ ಗುಣಮಟ್ಟ ಕಡಿಮೆಯಾಗಿರುತ್ತದೆ. ಇದರಿಂದಾಗಿ ಶ್ವಾಸಕೋಶದಲ್ಲಿ ಉರಿಯೂತವುಂಟಾಗುತ್ತದೆ. ಇದು ಕೊರೋನಾ ವೈರಸಿಗೆ ಹೇಳಿ ಮಾಡಿಸಿದ ಸ್ಥಿತಿ ಎಂದು ಏಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ| ನೀರಜ್ ನಿಶಾಲ್ ಅಭಿಪ್ರಾಯ ಪಡುತ್ತಾರೆ.

ವಾಯುಮಾಲಿನ್ಯ ಹೆಚ್ಚಾದಂತೆ ಕೊರೋನಾ ಹರಡುವ ಪ್ರಮಾಣವೂ ಹೆಚ್ಚಾಗುತ್ತದೆ. ಯಾವುದೇ ಒಂದು ದೇಶದಲ್ಲಿ ವಾಯುಮಾಲಿನ್ಯ ಹೇಗಿದೆಯೆಂಬುದನ್ನು ನೋಡಿಕೊಂಡು ಅಲ್ಲಿ ಕೊರೋನಾ ಹರಡುವ ವೇಗವನ್ನು ಅಂದಾಜಿಸಬಹುದು. ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿರುವ ಕೊರೋನಾ ರೋಗಿಗಳು ಹೆಚ್ಚು ಗಂಭೀರಾವಸ್ಥೆಗೆ ತಲುಪುವ ಸಾಧ್ಯತೆವೂ ಹೆಚ್ಚಾಗಿರುತ್ತದೆ.

ವಾಯುಮಾಲಿನ್ಯವಿರುವ ಪ್ರದೇಶಗಳ ಜನರು ಗಾಳಿಯಲ್ಲಿರುವ ಅಪಾಯಕಾರಿ ಕಣಗಳನ್ನು ನಿರಂತರವಾಗಿ ಸೇವಿಸುತ್ತಾ ಇರುತ್ತಾರೆ. ಇದು ಉಸಿರಾಟದ ತೊಂದರೆ, ಹೃದಯ ಸಂಬಂಧಿ ಖಾಯಿಲೆಗಳಿಗೆಲ್ಲಾ ಕಾರಣವಾಗುತ್ತದೆ. ಕೊರೋನಾ ರೋಗವು ಮಾರಕವಾಗಿ ಪರಿಣಮಿಸಲು ಕಾರಣವಾಗಿರುವ ಅಂಶ ಇದೇ ಆಗಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು