ಬಾಹ್ಯಾಕಾಶದಲ್ಲಿ ಕೂದಲೆಳೆಯ ಅಂತರದಲ್ಲಿ ತಪ್ಪಿದ ದುರಂತ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನ್ಯೂಯಾರ್ಕ್ (19-10-2020): ಬಾಹ್ಯಾಕಾಶದಲ್ಲಿ ದೊಡ್ಡದೊಂದು ದುರಂತ ತಪ್ಪಿಹೋಗಿದೆಯೆನ್ನಲಾಗಿದೆ. ರಷ್ಯಾದ ನಿಷ್ಕ್ರಿಯಗೊಂಡ ಕೃತಕ ಉಪಗ್ರಹ ಮತ್ತು ಚೈನಾದ ರಾಕೆಟಿನ ದೊಡ್ಡದೊಂದು ಭಾಗ ಪರಸ್ಪರ ಢಿಕ್ಕಿ ಹೊಡೆಯುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.

ಬಾಹ್ಯಾಕಾಶದಲ್ಲಿ ಮನುಷ್ಯ ನಿರ್ಮಿತ ವಸ್ತುಗಳು ಪರಸ್ಪರ ಢಿಕ್ಕಿ ಹೊಡೆಯುವ ಸಾಧ್ಯತೆ ಶೇಕಡಾ 0.001 ಶೇಕಡಾ. ಆದರೂ ನಾಸಾವು ಅಂತರಿಕ್ಷ ನಿಲ್ದಾಣದ ಸ್ಥಳವನ್ನು ಆಗಾಗ ಬದಲಿಸುತ್ತಿರುತ್ತೆ. ಯಾವುದಾದರೂ ವಸ್ತುಗಳು ಪರಸ್ಪರ ಢಿಕ್ಕಿಯಾದರೆ ಭೂಮಿಗೆ ತಕ್ಷಣಕ್ಕೆ ದೊಡ್ಡ ಆಪತ್ತು ಇಲ್ಲದಿದ್ದರೂ ಭವಿಷ್ಯದಲ್ಲಿ ರಾಕೆಟ್, ನೌಕಾಯಾನ, ಕೃತಕ ಉಪಗ್ರಹ ಇತ್ಯಾದಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆಯಿರುತ್ತದೆ.

ಢಿಕ್ಕಿ ಹೊಡೆದಾಗ ವಸ್ತುಗಳು ಸಾವಿರಾರು ಸಣ್ಣಸಣ್ಣ ಚೂರುಗಳಾಗಿ ಬಾಹ್ಯಾಕಾಶವನ್ನು ಮಲಿನಗೊಳಿಸುತ್ತವೆ. ಈಗಾಗಲೇ ಸುಮಾರು ನೂರ ಮೂವತ್ತು ಲಕ್ಷ ಇಂತಹ ಬಾಹ್ಯಾಕಾಶ ತ್ಯಾಜ್ಯಗಳು ಅಲ್ಲಿವೆ. ಇದರಲ್ಲಿ, ಆಕಾಶ ನೌಕೆಗಳ ರಾಕೆಟುಗಳ, ಕೃತಕ ಉಪಗ್ರಹಗಳ ಬಿಡಿ ಭಾಗಗಳೂ ಸೇರಿವೆ.

ಬಾಹ್ಯಾಕಾಶ ತ್ಯಾಜ್ಯಗಳು ಎಷ್ಟೇ ಸಣ್ಣದಾಗಿದ್ದರೂ ಅದು ಬಾಹ್ಯಾಕಾಶ ನೌಕೆಗಳಿಗೆ, ಸ್ಯಾಟಲೈಟುಗಳಿಗೆ ಅಪಾಯ ತಂದೊಡ್ಡಬಲ್ಲವು. ಯಾಕೆಂದರೆ ಆ ತ್ಯಾಜ್ಯಗಳ ಚಲನೆಯ ವೇಗೆ ಬಂದೂಕಿನಿಂದ ಸಿಡಿದ ಗುಂಡಿನ ವೇಗಕ್ಕಿಂತಲೂ ಹತ್ತು ಪಟ್ಟು ಹೆಚ್ಚಾಗಿರುತ್ತವೆ ಎಂದು ಬಾಹ್ಯಾಕಾಶ ವಿಜ್ಞಾನಗಳು ಹೇಳುತ್ತಾರೆ.

ಗುರುವಾರ ತಪ್ಪಿ ಹೋದ ದುರಂತದಲ್ಲಿ ವಸ್ತುಗಳು ಪರಸ್ಪರ ಎಂಟು ಮೀಟರಿನಿಂದ ನಲವತ್ತಮೂರು ಮೀಟರಿನಷ್ಟು ಹತ್ತಿರಕ್ಕೆ ಬಂದಿದ್ದವು ಎಂದು ಬಾಹ್ಯಾಕಾಶ ತ್ಯಾಜ್ಯಗಳನ್ನು ಟ್ರಾಕ್ ಮಾಡುವ ಸಂಸ್ಥೆ ಲಿಯೋ ಲಾಬ್ಸ್ ಮೂಲಕ ತಿಳಿದು ಬಂದಿದೆ. ಹನ್ನೆರಡು ಮೀಟರುಗಳಷ್ಟು ಹತ್ತಿರಕ್ಕೆ ಇವು ಬರಲಿವೆಯೆಂದೂ, ಢಿಕ್ಕಿ ಹೊಡೆಯುವ ಸಾಧ್ಯತೆ ಹತ್ತು ಶೇಕಡಾದಷ್ಟು ಇದೆಯೆಂದೂ ಲಿಯೋಲಾಬ್ಸ್ ಮೊದಲೇ ಅಂದಾಜಿಸಿತ್ತು. ಇದು ಈ ವರೆಗಿನ ನಡೆದ ಎಲ್ಲಕ್ಕಿಂತಲೂ ಹೆಚ್ಚಿನ ಪ್ರಮಾಣದ್ದಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು